"ಪ್ರಕೃತಿಯ ನಿಯಮ"

"ಮಳೆಬರುವುದು ನಿಂತರು
ಮರದಮೇಲಿನ ಹನಿಗಳು
ಬೀಳುವುದು ನಿಲ್ಲಲಿಲ್ಲ..
ಗುಡುಗು, ಸಿಡಿಲುಗಳು
ಬಿದ್ದುಹೋದರು..
ಅವುಗಳ ಶಬ್ದಗಳು ಕಿವಿಯಿಂದ ಮರೆಮಾಚಲಿಲ್ಲ
ಮಳೆಬಂದರು, ಸಿಡಿಲುಗಳು ಬಿದ್ದರು
ಊರೆಲ್ಲ ಕೆಸರಾದರೂ ಜನಗಳು
ಓಡಾಡುವುದು ಬಿಡಲಿಲ್ಲ..
ಪ್ರಕೃತಿಯಲ್ಲಿ ಏನೇ ಆದರೂ
ಯಾರೆ ಹೋದರು ತನ್ನ ಕೆಲಸ
ಮುಂದುವರೆಸುವುದು
ಪ್ರಕೃತಿಯ ನಿಯಮವಾಗಿದೆ..
ನಾವು ಸಹ ನಮ್ಮ ಜೀವನದಲ್ಲಿ
ಏನೆ ಆದರೂ, ಯಾರೆ ಬಂದು ಹೋದರು
ಹಿಗ್ಗದೆ, ಕುಗ್ಗದೆ ಎಲ್ಲವನ್ನು ಸಮಾನವಾಗಿ
ಮುಂದುವರೆಸುಕೊಂಡು ಹೋಗುವುದು
ನಮ್ಮೆಲ್ಲರ ಜೀವನದ ನಿಯಮವಾಗಿದೆ"...

- ಎ.ಆರ್.ರಾಹುಲ್.


- ?.?.?????.

18 Apr 2025, 09:07 am
Download App from Playstore: