...ನನ್ನಪ್ಪ...
"ಶಾಲೆಗೆ ಸೀರಿಸಲು ಬಂದ ನನ್ನಪ್ಪ...
ನನ್ನ ಮಗ ಓದಿ ದೊಡ್ಡ ವ್ಯಕ್ತಿಯಾಗಲಿ ಎಂದ ನನ್ನಪ್ಪ..
ವರ್ಷದಲ್ಲಿ ಒಂದು ಬಾರಿಯು ನನ್ನ ಬಗ್ಗೆ ವಿಚಾರಿಸಲು
ಶಾಲೆಗೆ ಬರಲಿಲ್ಲ ನನ್ನಪ್ಪ...
ನನ್ನ ಮಗ ಓದುವುದರಲ್ಲಿ ಹಿಂಜರಿಯುವುದಿಲ್ಲ ಎಂದು
ನಂಬಿಕೆ ಇಟ್ಟ ನನ್ನಪ್ಪ...
ಓದಿ ನನ್ನ ನೋಡಿಕೋ ಅನ್ನಲಿಲ್ಲ ನನ್ನಪ್ಪ...
ಓದಿ ನಿನ್ನ ಜೀವನ ನೀ ಕಟ್ಟಿಕೊ ಎಂದ ನನ್ನಪ್ಪ...
ಇತರ ಸ್ನೇಹಿತರ ಜೊತೆ ಸುತ್ತಾಡಿದರು ಕೇಳಲಿಲ್ಲ ನನ್ನಪ್ಪ..
ನನ್ನಂತೆ ಕುಡುಕನಾಗಬೇಡ ಎಂದು ಬುದ್ದಿಹೇಳಿದ ನನ್ನಪ್ಪ..
ಕಷ್ಟಪಟ್ಟು ಜಮಿನ್ದಾರ ಮನೆಯಲಿ ಕೆಲಸ ಮಾಡುವಾಗ ನನ್ನಪ್ಪ..
ಜಮಿನ್ದಾರು ಮಗನ ಬಗ್ಗೆ ಕೇಳಿದಾಗ ನನ್ನಪ್ಪ..
ತನ್ನೆಲ್ಲ ಕಷ್ಟಗಳನ್ನು ಒಂದೇ ಕ್ಷಣ ಮರೆತು ತನ್ನ ಮಗನ ಬಗ್ಗೆ
ಹೆಮ್ಮೆಯಿಂದ ಹೇಳಿಕೊಂಡ ನನ್ನಪ್ಪ"...
- ಎ.ಆರ್.ರಾಹುಲ್
- ?.?.?????.
08 Apr 2025, 07:33 am
Download App from Playstore: