ಅಂಬೇಡ್ಕರ್ ರವರು

ಶ್ರೇಷ್ಠ -ಕನಿಷ್ಠದ ನೋವು ತಿಂದವರು
ಕನಿಷ್ಠದ ಅನಿಷ್ಟಕೆ "ಕಾವು" ಕೊಟ್ಟವರು
ಮಾನ-ಅಪಮಾನದ ಅಂಚಲ್ಲಿ ಬೆಂದವರು
ಅಪಮಾನದ ಕಂಚಿಗೆ "ಧೈರ್ಯ"ದ ನೀರು ಎರೆದವರು

ಹಸಿವು-ಬಡತನದ ಬ್ಯಾನಿಯ ತಿಂದವರು
ಬಡತನದ ಬ್ಯಾನಿಗೆ "ಅಕ್ಷರ"ದ ಮಾತ್ರೆ ನುಂಗಿದವರು
ಹೊಂಚು-ಸಂಚಿನ ಭಂಡತನಕೆ ಬಳಲಿದವರು
ಸಂಚಿನ ಡೋಂಗಿಗೆ "ಸಾಹಸ"ದ ತೀರ್ಥ ಕುಡಿಸಿದವರು

ಮಣ್ಣು-ಹೆಣ್ಣಿನ ಗೋಳನು ಕಣ್ಣಾರೆ ಕಂಡವರು
ಹೆಣ್ಣಿನ ಬಾಳಿಗೆ ಮಣ್ಣಿನ "ಋಣ"ವ ತೀರಿಸಿದವರು
ಪರಿಸರ-ಪ್ರಕೃತಿಯು ಕೆಲವರಿಗೇ ಯಾಕೆ? ಅಂದವರು
ಪ್ರಕೃತಿಯ ಸಂಸ್ಕೃತಿಯು "ಎಲ್ಲರಿಗೂ" ಎಂದವರು

ರೂಪಾಯಿ-ನೋಟಿನ ವಯ್ಯಾರ ನೋಡಿದವರು
ನೋಟಿನ ಸಿಂಗಾರದ ಪ್ಲೇಟಿಗೆ ಕಪಾಟು ಬಡಿಸಿದವರು
ಛಿದ್ರ -ಭದ್ರತೆಗೆ ಪೆನ್ನಿನ ಇಂಕನು ಸವಸಿದವರು
ಭದ್ರತೆಗೆ ಗೀಚಿದ ಪೆನ್ನಿಗೆ "ಮಸಿ"ಯ ಹಚ್ಚದವರು
ಸುಗ್ಗಿ..










- ಆರ್. ಎಸ್ .ಸುಗ್ಗಿ

03 Apr 2025, 08:45 pm
Download App from Playstore: