ಬದಲಾಗಬೇಕಿದೆ ಈ ಮನ
ಬದುಕಿನಲ್ಲಿ ಬರುವರು
ಎಲ್ಲರು ಜೊತೆಗಿರುವವರು
ಕೆಲವರು ಬೆಳವಣಿಗೆ ಕಂಡಾಗ
ಉರಿದುಕೊಳ್ಳುವರು
ಅದನ್ನರಿತು ಬದಲಾಗಬೇಕಿದೆ
ನಾನೀಗ.
ದುಃಖದಲ್ಲಿದ್ದಾಗ ಸಂತೈಸುವವರಿಲ್ಲ
ಬಿದ್ದಾಗ ಮೇಲೇತ್ತುವವರಿಲ್ಲ
ಮುಖವಾಡಗಳ ಕಳಚಿ ಬದುಕುವವರಿಲ್ಲ
ಇದು ಇಂದಿನ ಜನರ ಜೀವನ
ಅದನ್ನರಿತು ಬದಲಾಗಬೇಕಿದೆ
ನಾನೀಗ.
ನನ್ನವರೆಂಬುವವರು
ಹಣದ ವ್ಯಾಮೋಹದಲ್ಲಿ
ಮುಳುಗಿಹರು ನಾವೂ ನಮ್ಮವರೆಂಬ
ಮಾನವೀಯತೆ ತಿಳಿಯದವರು
ನನ್ನ ಏಳ್ಗೆಯನ್ನ ಸಹಿಸದವರು
ಅದನ್ನರಿತು ಬದಲಾಗಬೇಕಿದೆ ನಾನೀಗ.
- ಮೇಘಾ ಬೆಳಧಡಿ
03 Apr 2025, 04:40 pm
Download App from Playstore: