ನಿನ್ನ ನೆನಪೇ ನನಗೆ ಗಿಫ್ಟ್
ನನ್ನ ನಿನ್ನ ಪ್ರೀತಿಯ ಹಾರ್ಟ್ ಟಿನಲಿ,
ನೆನಪೇ ಒಂದು ಗಿಫ್ಟ್ಟು ನನಗಿಲ್ಲಿ,,
ನಿನ್ನ ಸನಿಹವನ್ನು ನಾನು,
ಬಯಸಿಬಂದೆ ಇನ್ನು,
ದೂರ ಹೋದೆ ಏಕೆ ಕ್ಷಣದಲ್ಲಿ ?,
ನನ್ನ ಬಿಟ್ಟು ಹೋದೆ ಏಕೆ ಬದುಕಲ್ಲಿ ಒಂಟಿ ಮಾಡಿ ಹೋದೆ ಏಕೆ ನನಗಿಲ್ಲಿ...
ನಿನ್ನ ದಾರಿಯ ಕಾಯುತ ಕುಳಿತೆನಾ..
ಬಂದೆ ಬರುವೆ ಎನ್ನುವ ನಿಜವನ್ನ,
ಅರಿತುಕೊಂಡೆ ನಾನು, ನೀ ದೂರವಾದರೇನು
ನಿನ್ನ ಬಿಟ್ಟು ಬದುಕುವೆ ನಾನು ನೆನಪಲ್ಲೇ,
ನಿನ್ನ ನೆನಪಲ್ಲೇ ನಾನು ಬದುಕುವೆ
ನಿನ್ನ ದಾರೀಯಾ ಕಾಯುತ ಕುಳಿತಿರುವೆ... ??
- ಅವಿನಾಶ್ ಎಲ್
03 Apr 2025, 02:08 pm
Download App from Playstore: