ಕವನದ ಶೀರ್ಷಿಕೆ ಚಂದ್ರಮಾನ ಯುಗಾದಿ.
ದುಷ್ಟ ಚಿಂತನೆಗಳ ಕಳೆ ಭಸ್ಮವಾಗಿ,
ನವ ಕನಸುಗಳ ಹೊಳೆ ಮೈದೊಳೆಯಲ್ಲಿ ಹಸಿರಾಗಿ.
ಸಂಬಂಧ ಬೆಸೆಯುವ ಕೋಗಿಲೆ ಕೂಗಲಿ ಇಂಪಾಗಿ,
ಹಬ್ಬದ ಹೊನಲಲಿ ಸವಿಯುವ ಬನ್ನಿ ಬೀವು ಬೆಲ್ಲವ ಸೊಗಸಾಗಿ.
ಪ್ರಜೆಗಳ ಸಂಗಮ ಹರ್ಷದಿಂದ ಸ್ವಾಗತಿಸಿತು ದಶರಥ ನಂದನನ.
ಮಾವಿನ ತೋರಣದಂತೆ ಜೀವನವ ನಡೆಸೋಣ,
ಪಂಚಾಂಗ ತಿಳಿಯುತ್ತ ಸ್ಪೂರ್ತಿ ಪಥ ಹಿಡಿಯೋಣ.
ಚೈತ್ರದ ಚಿಪ್ಪುಡೆದು ಚಿಮ್ಮಿತು ಯುಗಾದಿ,
ಸಾಷ್ಟಾಂಗ ಸಂಪ್ರದಾಯಗಳ ಶುರುವಿಡುವ ಶುಭ ಕಾರ್ಯಕ್ಕೆ ಇದು ತಳಹದಿ.
ನೋಡಲು ಚಂದ ಮಕ್ಕಳಾಟದ ಚಿತ್ತಾರವ,
ಒಬ್ಬಟ್ಟಿನ ಔತಣವು ಸೂಚಿಸುವುದು ಸಂಭ್ರಮವ.
ಹೊಸ ವರ್ಷದ ಆರಂಭ ಚಂದ್ರಮಾನ ಯುಗಾದಿ,
ಮುತ್ತಿನ ಮಳೆ ಹನಿ ಮೈತ್ರಿಯೆ ಧರೆಗೆ ಸನ್ನಿಧಿ.
- nagamani Kanaka
30 Mar 2025, 08:03 pm
Download App from Playstore: