ಕನ್ನಡಮ್ಮ

ನನ್ನಯ ಕನ್ನಡ ಹೆಮ್ಮೆಯ ಕನ್ನಡ
ನನ್ನಯ ಬದುಕಿನ ಜೀವವು ಕನ್ನಡ ಬಡಿದೆಬ್ಬಿಸಿದಾಗ ನುಡಿವೆನು ಕನ್ನಡ
ನಲ್ಮೆಯ ಕನ್ನಡ ಮಮತೆಯ ಕನ್ನಡ.


ನಗುವಲ್ಲಿ ಕನ್ನಡ
ನಡೆಯಲಿ ಕನ್ನಡ
ನುಡಿಮುತ್ತುಗಳಲ್ಲಿ ಕನ್ನಡ
ಎನ್ನ ಮನವೆಲ್ಲಾ ಕನ್ನಡ
ಅದರ ಸೊಬಗನು ಬೆಳೆಸೋಣ.


ಮರವಾಗಿದೆ ಕನ್ನಡ
ನೆರಳಾಗಿದೆ ಕನ್ನಡ
ಫಲವಾಗಿದೆ ಕನ್ನಡ
ಬದುಕಾಗಿದೆ ಕನ್ನಡ
ರೇಷ್ಮೆಯಿಂದ ಅದನು ಹೊದಿಸೋಣ


ಕೆತ್ತನೆಯಲಿ ಕನ್ನಡ
ಬಿತ್ತನೆಯಲಿ ಕನ್ನಡ
ಇರುವಿಕೆಯಲಿ ಕನ್ನಡ
ಉಡುಗೆಯಲಿ ಕನ್ನಡ
ಕನ್ನಡದ ಬಾವುಟವ ಜಗದುದ್ದಕ್ಕೂ ಪಸರಿಸೋಣ ಮುಗಿಲೆತ್ತರಕ್ಕೆ ಕೊಂಡೊಯ್ಯೋಣ.

- ಮೇಘಾ ಬೆಳಧಡಿ

24 Mar 2025, 10:53 pm
Download App from Playstore: