ಒಲವಿನ ಕನ್ನಡ
ಓ ಮನವೇ
ನೀ ದುಡುಕದಿರು
ಪರರ ಭಾಷೆಗೆ
ಮನಸೋಲದಿರು
ನನ್ನಯ ತಾಯಿಯ
ಮಾನ ಪ್ರಾಣ ಹೋಗದಾಗೆ
ಕಾಪಾಡುತಿರು!
ಎನ್ನ ತಾಯಿಯ ಮಡಿಲು
ಬರಿದು ಮಾಡದಿರು!
ನನ್ನೊಲುಮೆಯ ನುಡಿಯನು ಅಳಿಸದಿರು
ಇರುವಿಕೆಯಲ್ಲಿ ಬದಲಾವಣೆ ತರದಿರು.
ಪರದೇಶದ ಉಡುಗೆಗೆ ನೀನೆಂದು
ಮಾರು ಹೋಗದಿರು.
ನನ್ನಯ ಒಲವೇ
ನಲ್ಮೆಯ ಗಿಣಿಯೇ
ಸುಂದರವಾಗಿಸೋಣ
ನನ್ನಯ ಕನ್ನಡ ಚಿನ್ನದ ಕನ್ನಡ
ಎಲ್ಲರು ಮೆಚ್ಚುವ ಸುಮಧುರ ಕನ್ನಡ.
- ಮೇಘಾ ಬೆಳಧಡಿ
24 Mar 2025, 10:45 pm
Download App from Playstore: