ನಲ್ಮೆಯ ಗೆಳತಿಗೆ
ಪ್ರೀತಿ ಎಂಬ ಪದಕ್ಕೆ ಸ್ಪೂರ್ತಿ ನೀನು |
ಸಿಗಲಾರದ ರಾಧೆಯನ್ನು ಮರೆಯಲಾಗದಷ್ಟು ಪ್ರೀತಿಸಿಬಿಟ್ಟೆ, ನಾನು ರಾಮನೋ ರಾವಣನೋ ಗೊತ್ತಿಲ್ಲ ಆದರೆ ನನ್ನಿಂದ ದೂರ ಆಗಿದು ಮಾತ್ರ ನನ್ನ ಸೀತಾ ನೇ||
ಜಗತಿನಲ್ಲಿ ಅತಿ ಪರಿಶುದ್ಧವಾದ ಪ್ರೀತಿ ಎಂದರೆ ಅದು ಸಿಗಲಾರದ ಪ್ರೀತಿ, ಹಣೆಬರಹದಲ್ಲಿ ಇಲ್ಲದವಳು ಹೃದಯದಲ್ಲಿ ದೇವತೆ ಆಗಿರುವಳು,
ಬೆಳ್ಳಿ ಕಾಲ್ಗೆಜ್ಜೆ ಬೇಕು ಎಂದವಳು ಇವತ್ತು ಬೇರೆಯವರ ಬೆಳ್ಳಿ ಕಾಲುಂಗುರ ವಡತಿಯಾಗಿ ಹೋದವಳು ನನ್ನವಳು,
ಒಳ್ಳೆ ಗುಣದವಳು ಹಾಲಿನ ಮನಸ್ಸಿನವಳು, ಅವಳೇ ನನ್ನವಳು,
ಸೀತೆಯ ಹಾಗೆ ಜೊತೆಗಿರಲು ಬಯಸಿದೆ ಆದರೆ ವಿಧಿ ರಾಧೆಯಂತೆ ದೂರ ಮಾಡಿತು,
ಕಣ್ಣೋಟದಲ್ಲಿ ಕಂಡವಳು ಕಣಂಚಿನಲ್ಲಿ ಮರೆಯದವಳು. ಮರೆಯಲಾಗದಷ್ಟು ಪ್ರೀತಿ ಕೊಟ್ಟು ಮೌನವಾಗಿ ದೂರವಾದಳು.
ನನ್ನವಳು ಮರಳಿ ಬಂದಳೆಂದು ಖುಷಿ ಆಯಿತು ಎದ್ದು ನೋಡಿದಾಗ ಬೆಳಗಿನ ಕನಸೇಂದು ತುಂಬಾ ನೋವಾಯಿತು.
ಅದೃಷ್ಟವಿಲ್ಲದ ಹಣೆಬರಹದಲ್ಲಿ
ವಜ್ರವೊಂದು ಸಿಕ್ಕಿ ಕೈಜಾರಿದಂತೆ......
- ಕನ್ನಡದ ಪ್ರೇಮಿ
22 Mar 2025, 01:35 pm
Download App from Playstore: