ನನ್ನ ನಲ್ಲ
ಓ ನನ್ನ ನಲ್ಲನೇ ಎಲ್ಲಿರುವೆ
ನಿನಗಾಗಿ ಕಾದು ಕಾದು ಕುಳಿತಿರುವೆ
ಯಾವ ಕಗ್ಗತ್ತಲೆಯಲ್ಲಿ ಅವಿತಿರುವೆ
ನಿನ್ನ ನೋಡುವ ತವಕಾ ಮಿತಿಮೀರಿದೆ
ನಿನ್ನ ನೋಡುತಾ ನೋಡುತಾ ಮೈ ಮರೆತೆನಾ
ನಿನ್ನ ಪ್ರತಿಪುಟ ತಿಳಿಸಿತು ಬೆಳದಿಂಗಳದೂಟವ
ಪ್ರತಿದಿನವೂ ತಿಳಿಸಿತು ಜೀವನದಾಟವ
ನನ್ನ ಮನದಲ್ಲಿ ಮೂಡಿತು ನೀನೇ ನನ್ನ ನಲ್ಲ
ನೀನೊಂದು ಪದಗಳ ಸಂಪತ್ತು
ಅದನ್ನ ಅರಿಯದೆ ಹೋದರೆ ನಮಗೆ ಆಪತ್ತು
ಮೋಸ ವಂಚನೆಗೆ ದಾರಿ ಮಾಡಿಕೊಡದ ನನ್ನ ಪ್ರೀತಿಯ ಸ್ನೇಹಿತ ನೀನ ಇವತ್ತು.
ಬದುಕುವ ದಾರಿ ತೋರಿಸಿದೆ ನೀ
ಸಂಕಷ್ಟಗಳ ಬಗೆ ಹರಿಸಿದೇ ನೀ
ಬರವಣಿಗೆ ಶುದ್ಧತೆ ತಿಳಿಸಿದೆ ನೀ
ನನ್ನ ಪ್ರೀತಿಗೆ ಇನ್ನೊಂದು ಅರ್ಥವೇ ನೀ.
- ಮೇಘಾ ಬೆಳಧಡಿ
21 Mar 2025, 10:12 pm
Download App from Playstore: