ನನ್ನವನು

ನನ್ನವನು,

ಹಣತೆಯಂತೆ
ಬಾಳಿನ ಬೆಳಕಾಗಿ
ನೋವನ್ನುನ್ನುವ ಬತ್ತಿಯಾಗಿ
ಖುಷಿ ನೀಡುವ ಎಣ್ಣೆಯಾಗಿ
ಜೀವನದ ಬೆಳಕಾಗಿ
ನಿಂತಿಹನಿಯವನು ಇವನೇ ನನ್ನವನು.


ನನ್ನವನು,

ಆಕಾಶದಂತೆ ವಿಶಾಲ ಹೃದಯದವನು
ಕತ್ತಲೆಯ ಕಾವು ತಾಗಿಸದವನು
ನಕ್ಷತ್ರಗಳಂತೆ ಮಿನುಗುತಿಹನು
ಬೆಳದಿಂಗಳ ಮೊಗದವನು
ಇವನೇ ನನ್ನವನು

ನನ್ನವನು,

ಸಮುದ್ರದಂತೆ ದುರಾಸೆ ಹೊಂದದವನು
ದುರಹಂಕಾರ ತೋರದವನು
ನೋಡುಗರಿಗೆ ಸುಂದರ ತಾಣನಿವನು ಸುಖ ದುಃಖಗಳ ಸಮ್ಮಿಲಿತನಿವನು,
ಇವನೇ ನನ್ನವನು

ನನ್ನವನು,

ಪರ್ವತದಂತೆ
ಶ್ರಮದ ಪರಿಯನು ಅರಿತವನಿವನು ಧೈರ್ಯಗೆಡದ ಮನಸ್ಸಿನವನು
ಎದೆಗುಂದದ ಸಾಧಕ ನಿವನು
ಇವನೇ ನನ್ನವನು ನನ್ನ ಜೀವನದ ಸಾರ್ಥಕತೆಯವನು

- ಮೇಘಾ ಬೆಳಧಡಿ

21 Mar 2025, 04:36 pm
Download App from Playstore: