ಮಗುವಿನ ಸೊಬಗು

ಮುದ್ದು ಮೊಗದ ಸಿಂಗಾರಿ
ನೀ ನನಗೆ ಮಾಡಿದೆ ಮೊಡಿ
ಕಣ್ಣ ಹೊಳಪಿನ ಸೆಳೆತ
ನನಗೇನು ಮಾಡಿದೆ ತವಕ.

ನೋಡಲು ಬಲು ಅಂದ
ಒಂದು ದೃಷ್ಟಿ ಬೊಟ್ಟ
ಇಟ್ಟರೆ ಮಗುವೇ
ನೀನು ಇನ್ನೂ ಚೆಂದ.

ನಿನ್ನ ತೊದಲು ನುಡಿಗಳಿಗೆ
ಬಿದ್ದಿತ್ತು ನನ್ನಯ ದೃಷ್ಟಿ
ಜೋಪಾನ,ಅಮ್ಮನಿಂದೊಂದು
ಇರಿಸಿಕೋ ದೃಷ್ಟಿಯ ಬೊಟ್ಟ.

ನೀನೊಂದು ಸುಂದರ ಗೊಂಬೆಯು
ಗೊಂಬೆಯ ಅಂದ ಹೊಗಳಲು
ಪದಗಳ ಸಂಗ್ರಹ ಸಾಲದು
ಕಲಾಕಾರನೇ ಧರೆಗಿಳಿದು ಬರಬೇಕು.


✍️ಮೇಘಾ B

- ಮೇಘಾ ಬೆಳಧಡಿ

21 Mar 2025, 03:23 pm
Download App from Playstore: