ಹಡೆದವ್ವನಲ್ಲ ಎನ್ನ ಪಡೆದವ್ವ

ಪುಟ್ಟ ಕಂದನಿದ್ದಾಗ
ಕರೆ ತಂದಳು ಎನ್ನ
ಹೂವಿನಂತೆ ಅಂಗೈಲಿ
ಪಿಡಿದು ರಕ್ಷಿಸಿದಳು,
ಅವಳೇ ನನ್ನವ್ವನಲ್ಲ ಎನ್ನ ಪಡೆದವ್ವ.


ಹದ ಮಾಡಿ,
ಹಣತೆಯ ಮಾಡಿ,
ಎಣ್ಣೆ ಬತ್ತಿಯಾಗಿ
ಪ್ರಜ್ವಲಿಸುವ ಜ್ಯೋತಿಯಾಗಿ ! ತ್ಯಾಗಮಯಿಯಾಗಿ ಸಂರಕ್ಷಿಸಿದಳು.
ಅವಳೇ ನನ್ನವನಲ್ಲ ಎನ್ನ ಪಡೆದವ್ವ

ಜನರ ನಿಂದೆನೆಗಳ ಸಹಿಸಿ
ಗುರುವಿನಂತೆ ತಿದ್ದಿ ತಿಡಿ
ಸಂಸ್ಕಾರವನ್ನು ನೀಡಿ
ಆಚಾರ ವಿಚಾರಗಳ ತಿಳಿಸಿ
ಕಷ್ಟಗಳ ಸೋಕಿಸದ ಹಾಗೆ ಬೆಳೆಸಿದಳು
ಅವಳೇ ನನ್ನವನಲ್ಲ ಎನ್ನ ಪಡೆದವ್ವ

ಬಾಳ ಬುತ್ತಿಯಲಿ
ಹಂಚಿಕೊಳ್ಳುವ ಗುಣ ಬೆಳೆಸಿ
ಬದುಕಿನ ಭವಣೆಯನು
ಎದುರಿಸುವ ರೀತಿ ತಿಳಿಸಿ
ಬಾಳುವ ಪರಿ ಸೋಕಿಸಿದವಳು
ಅವಳೇ ನನ್ನವನಲ್ಲ ಎನ್ನ ಪಡೆದವ್ವ

✍️ಮೇಘಾ. B

- ಮೇಘಾ ಬೆಳಧಡಿ

21 Mar 2025, 03:04 pm
Download App from Playstore: