ಕಾಲ್ಪನಿಕ ಹೆಣ್ಣು

ಹೆಣ್ಣೆಂದರೆ ಸಾಂಪ್ರಾದಾಯಿಕ ಮೌಲ್ಯ ಒಪ್ಪಿರುವವಳು
ಹೆಣ್ಣೆಂದರೆ ಸಂಸ್ಕೃತಿ ಆಚಾರ ವಿಚಾರಕ್ಕೆ ಒಗ್ಗಿದವಳು
ಹೆಣ್ಣೆಂದರೆ ಅರಿಸಿನ -ಕುಂಕುಮ ಮಹತ್ವ ಅರಿತವಳು
ಹೆಣ್ಣೆಂದರೆ ಮೌನವಹಿಸಿ ಮಾತಿನ ಮೌಲ್ಯಅರಿತವಳು
ಹೆಣ್ಣೆಂದರೆ ಮೂಗುತಿ ? ಸುಂದರಿಯವಳು
ಹೆಣ್ಣೆಂದರೆ ವಿದ್ಯಾವಂತಳು ಹಾಗೂ ಧೈರ್ಯವಂತಳು
ಹೆಣ್ಣೆಂದರೆ ಭವಿಷ್ಯದ ಜೀವನದ ಕನಸು ಕಂಡಂತವಳು
ಹೆಣ್ಣೆಂದರೆ ಮಗು ಮನಸ್ಸಿನ ತುಂಟತನದವಳು
ಹೆಣ್ಣೆಂದರೆ ಹಠಮಾರಿಯಲ್ಲದೆ ಕ್ಷಮೆಧಾತ್ರಿಯವಳು
ಹೆಣ್ಣೆಂದರೆ ಹಿರಿಯವರು ಪಾಲಿಗೆ ಮಗಳಾದವಳು
ಹೆಣ್ಣೆಂದರೆ ಗಂಡನ ಅರ್ಥೈಸಿಕೊಂಡು ಬಾಳ್ವೆ ಮಾಡಿದವಳು
ಹೆಣ್ಣೆಂದರೆ ತಂದೆತಾಯಿ ಪಾಲಿನ ಚಿಕ್ಕ ಕೂಸಂತವಳು
?️ಸುನಿಲ್ ಪುರು ❤️ ❤️ ❤️


- ಸುನಿಲ್

18 Mar 2025, 10:18 pm
Download App from Playstore: