ಗೌರವ ಸಮರ್ಪಣೆ.

ಸಹಸ್ರ ಅವತಾರಗಳ ಸದ್ರೂಪವೇ ಹೆಣ್ಣು,
ಕುಟುಂಬದ ಪರಿವಾರವ ಸಲಾಹೋ ಮಾತೆಯೇ ಸಂಸಾರದ ಕಣ್ಣು.

ಪೂಜೆಗೆ ಪವಿತ್ರ ಗೀತೆಗಳ ಪಠಣ,
ಪುರುಷನ ಪ್ರೇರಣೆಗೆ ಹೆಣ್ಣೇ ಭೂಷಣ.

ಕುದಿಯುವ ನೆತ್ತರನ್ನು ತಣಿಸುವಳು ತಾಳ್ಮೆಯಲ್ಲಿ,
ಮಗುವಾಗಿ ನಗುವಳು ಕಂದನಿಗೆ ಪಾಡೊ ಜೋಗುಳದಲ್ಲಿ.

ಚಿಟ್ಟೆಯಂತೆ ನಲಿಯುವಳು ತವರ ಸೀಮೆಯಲಿ,
ಮೇಣದಂತೆ ಸವೆಯುವಳು ಗಂಡನ ಮನೆಯಲ್ಲಿ.

ಸುಳಿವಿರದ ಕೂಪದಿ ನರಳುತ್ತಿದ್ದಳು ಅಂದು,
ಶಿಕ್ಷಣದ ಸೊಭಗಿಂದ ಎಲ್ಲೇ ಮೀರಿ ಶೋಭಿಸುತ್ತಿಹಳಿಂದು.

ಸ್ತ್ರೀಯರ ಏಳಿಗೆಗೆ ನಾಯಕನಾದ ವಿಶ್ವಸಂಸ್ಥೆ,
ಬೆನ್ನೆಲುಬಾಯ್ತು ಮಹಿಳಾ ಹಕ್ಕುಗಳ ಜೊತೆ.

ಸಶಕ್ತರಾದ ಮಹಿಳೆಯರು,
ಮೂಡುವ ಮುಂಗೋಳಿಗಳಿಗೆ ಮಾರ್ಗದರ್ಶಕರು.

ಮೊಗ್ಗುಗಳ ಮೆದುಳಲ್ಲಿ ಸಾಧಿಸುವ ಛಲವಿರಲಿ,
ಸಿಂಹ ಘರ್ಜನೆಯಲ್ಲೂ ನವರಸದ ಗುಣವಿರಲಿ.

ಜಗವೆಲ್ಲ ಬೆರಗಾಗಿ ಪ್ರಶಂಸಿಸುವುದು ಸ್ತ್ರೀಯರನ್ನ,
ಗೌರವ ಸಮರ್ಪಣೆಗೆ ಮೀಸಲು ಮಾರ್ಚ್ 8 ರ ಮಹಿಳಾ ದಿನ.

- nagamani Kanaka

08 Mar 2025, 05:39 am
Download App from Playstore: