ಏಕಾಂತದ ಕವಿತೆ....
ಅಮ್ಮನ ಮಡಿಲ ನೆಮ್ಮದಿಯದು ಕವಿತೆ,
ಗುರುಹಿರಿಯರ ಹಿತವಚನವದು ಕವಿತೆ,
ಪ್ರೇಮಿಗಳ ಸಲ್ಲಾಪದಿ ಹೊಮ್ಮವುದು ಕವಿತೆ,
ನೊಂದವರ ನುಡಿಯೊಳೊಡಮೂಡುವುದು ಕವಿತೆ,
ಬಲ್ಲವರ ಪದಗಳಲಡಗಿಹುದು ಕವಿತೆ,
ಮತಿವಂತರ ಮಾತಿಂದೊರಡುವುದು ಕವಿತೆ,
ಕವಿತೆಗಿಲ್ಲ ಯಾವುದೇ ಅಳತೆ,
ಅಳತೆ ಮೀರಿ ಬೆಳೆಯುವುದು ಕವಿತೆ,
ಕತ್ತಲೆ ದಾಟಿಸುವ ಅಣತೆಯದು ಕವಿತೆ,
ಏಕಾಂತದ ಸಮಯದಿ ಮೂಡಿಹುದು ಈ ಕವಿತೆ..
---- tippu ----
- tippu
07 Mar 2025, 08:34 pm
Download App from Playstore: