ನನ್ನವ್ವ..
ಬದುಕಿನಲ್ಲಿ ಹೊಸ ಭರವಸೆಯ ಬೆಳಕಿನೊಂದಿಗೆ...
ನಂಬಿಕೆಯ ಕೈಹಿಡಿದು ಹೊಸ್ತಿಲಲ್ಲಿ ಸೇರು ಒದ್ದು,
ಸಾಲು ಸಾಲು ಜವಾಬ್ದಾರಿಯ ತನ್ನ ಹೆಗಲ ಮೇಲೆ ಹೊತ್ತು,
ನೂರಾರು ಕನಸು ಕಟ್ಟಿ ಒಡಲು ತುಂಬಿಕೊಂಡಳು... ತನ್ನೊಡಲೊಳಗಿರುವಾಗಲೇ ನನ್ನ ಮೇಲೆ ಪ್ರಾಣವಿರುಸಿದವಳು.
ಹಡೆದು ಕಂದನ ಕಪ್ಪು ಬಿಳುಪು ಎನ್ನದೆ ತನ್ನಎದೆಗೆ ಅಪ್ಪಿ ಮುತ್ತಿಟ್ಟಳು.....
ಸಾವಿರ ಕನಸುಗಳ ತೊಟ್ಟಿಲ ಕಟ್ಟಿ ಮಲಗಿಸಿ ತೂಗಿದಳು.
ಬಲು ಸುಂದರ! ನನ್ನ ಮಗ ಎಂದು ಮೊದಲು ದೃಷ್ಟಿ ತೆಗೆದವಳು.
ಸ್ವಾಭಿಮಾನ,ಧೈರ್ಯ, ಆತ್ಮವಿಶ್ವಾಸ,ಛಲದ ಮೊದಲ ಪಾಠ ಕಲಿಸಿದವಳು ನನ್ನವ್ವ..
ತುತ್ತು ಕೊಟ್ಟು ಮುತ್ತನಿಟ್ಟು ಪ್ರಾಣವನ್ನೇ ಮುಡುಪಾಗಿಟ್ಟಳು.
ತೊರೆದು ಆಸೆ ಆಕಾಂಕ್ಷೆ ಮರೆತು ಅವಳ ಸುಖದ ಜೀವನವ ನಮಗಾಗಿ..
ಚಳಿ ಮಳೆ ಗಾಳಿ ಬಿಸಿಲೆನ್ನದೆ ದುಡಿದು ಗಂಡನಿಗೆ ಬಲವಾದಳು..
ತಾನುಟ್ಟ ಸೀರೆ ಹಳೆಯದಾದರೂ ನಂಬಿಕೆಯ ಸೂರು.. ತನ್ನೊಡಲ ಕಟ್ಟಿ ಮಕ್ಕಳು ಒಡಲಿಗೆ ತುತ್ತು ಅನ್ನವೂ ಕಡಿಮೆ ಮಾಡದವಳು
ಜೀವಿಸಿದಳು ಮಕ್ಕಳ ಖುಷಿಯನ್ನು ತನ್ನ ಖುಷಿಯಂತೆ ಸಂಭ್ರಮಿಸಿ..
ಗೆಲುವು ಸೋಲು ಸುಖವೋ ದುಃಖವೋ ನೆರಳಂತೆ ಜೊತೆಯಾಗಿರುವಳು
ತನಗಾಗಿ ಯಾವ ಪ್ರತಿಫಲವನ್ನು ಬಯಸದ ಜೀವ.... ನಿನಗೆ ನನ್ನ ನಮನ.
- ಸುದೀಪ್ ಎಚ್ ಟಿ
U29XR24E0081
- vijay
28 Feb 2025, 12:25 am
Download App from Playstore: