ಕವನದ ಶೀರ್ಷಿಕೆ ಪರಿಶುದ್ಧ ಮನಸ್ಸು.
ಗೃಹಸ್ಥಾಶ್ರಮ ಪ್ರವೇಶಕ್ಕೆ ಅಡ್ಡಿಯಾದ ಅರಸನ ಶಾಸನ,
ಬ್ರಹ್ಮಚರ್ಯದಲ್ಲೇ ಬಳಲಿಸಿತು ಸೈನ್ಯ ಸೇರೋ ಯುವಕರನ್ನ.
ಶರಧಿಯ ತಡಿಯಲ್ಲಿ ಮೋಹಿಸಿದ ಹೃದಯಗಳಿಗೆ,
ವಿವಾಹದ ಮೇಘದೂತನಾದ
ಸೇಂಟ್ ವ್ಯಾಲೆಂಟೈನ್ಸ್ಟೈನ.
ರಾಜನ ಅಂಕೆ ದಾಟಿದವಗೆ ಮುಳ್ಳಿನ ಪಂಜರದ ಸೆರೆ,
ಅನ್ಯಾಯ ರಹಿತ ಮನಸಿಗೆ ಅಲ್ಲಿ ಜೊತೆಯಾದ ಜೂಲಿಯಾಳೆ ಅಪ್ಸರೆ.
ನುಂಗುವ ಮೊಸಳೆ ಅಂತ ದೊರೆಯ ಹಿಂಸೆಗೆ ಕರಗಿದ ಸೇಂಟ್ ಮಣ್ಣಿನಲ್ಲಿ,
ಪಾರಿವಾಳ ಪರಿತಪಿಸಿದ ಪತ್ರದ ಸಾಲು ಸ್ಥಿರಗೊಂಡಿತು ಪ್ರೇಮಿಗಳ ಹೃದಯದಲ್ಲಿ.
ಹಿಗ್ಗುವ ಅಂತರಂಗಕ್ಕೆ ತಾಕುವ ಪ್ರೀತಿ,
ಸರ್ಪಗಾವಲಂತೆ ತನ್ನವರ ಕಾಯುವುದು ಬಿಡಿಸಿ ಭೀತಿ.
ಮಾರುವೇಷದಿ ಮೈ ಮರೆಸಲು ಬಂದ ಉಡುಗೊರೆಗಳು,
ಹೊತ್ತು ತರಬಹುದು ಕಬ್ಬಿಣದ ಸಲಾಕೆಯಂತೆ ಸುಡುವ ಕ್ಷಣಗಳು.
ಪರಿಶುದ್ಧ ಮನವಿರಲಿ ಬಯಸುವವರ ಎದೆಯಲ್ಲಿ,
ಫೆಬ್ರವರಿ 14 ಶ್ರೇಷ್ಠತೆಯ ಕಾರ್ಯಗಳ ನೆನಪಾಗಿರಲಿ.
- nagamani Kanaka
14 Feb 2025, 11:39 pm
Download App from Playstore: