ಅಪ್ಪನ ಹೆಗಲು - ಅಮ್ಮನ ಮಡಿಲು

ಪಲ್ಲಕ್ಕಿಯಂತ ಅಪ್ಪನ ಹೆಗಲು
ರಕ್ಷಾ ಕವಚದಂತ ಅಮ್ಮನ ಮಡಿಲು
ಜೋಡಿ ಕಣ್ಣಂತಿವೆ ಆಗುತ್ತಿಲ್ಲ ಪ್ರತ್ಯೇಕಿಸಲು
ಬಲು ಕಷ್ಟ ಯಾವುದಾದರೊಂದನ್ನು ಆಯ್ಕೆ ಮಾಡಲು

ಜೀವನೀಡಲು ನೋವುಂಡಿದೆ ಒಡಲು
ಜೀವನ ರೂಪಿಸಲು ಶ್ರಮಿಸಿದೆ ಹಗಲಿರುಳು
ಜೋಡಿ ಕಣ್ಣಂತಿವೆ ಆಗುತ್ತಿಲ್ಲ ಬೇರ್ಪಡಿಸಲು
ಬಲು ಕಷ್ಟ ಯಾವುದಾದರೊಂದನ್ನು ಆಯ್ಕೆ ಮಾಡಲು

ಬಟ್ಟೆ ಬೇಡಂತೆ ನನಗೊಬ್ಬನಿಗೆ ಕೊಡಿಸಲು
ಹೊಟ್ಟೆತುಂಬಿದೆಯಂತೆ ನನಗಷ್ಟೇ ತಿನಿಸಲು
ಜೋಡಿ ಕಣ್ಣಂತಿವೆ ಆಗುತ್ತಿಲ್ಲ ಅದಲು ಬದಲು
ಬಲು ಕಷ್ಟ ಯಾವುದಾದರೊಂದನ್ನು ಆಯ್ಕೆ ಮಾಡಲು

ಒಂದು ಅಕ್ಷಯ ಪಾತ್ರೆ ಕೇಳಿದ್ದ ಕೊಡಿಸಲು
ಇನ್ನೊಂದು ಗುರುವಿನ ಸ್ಥಾನಕ್ಕೆ ಮೊದಲು
ಜೋಡಿ ಕಣ್ಣಂತಿವೆ ಆಗುತ್ತಿಲ್ಲ ವ್ಯತ್ಯಾಸ ಹೇಳಲು
ಬಲು ಕಷ್ಟ ಯಾವುದಾದರೊಂದನ್ನು ಆಯ್ಕೆ ಮಾಡಲು

✍? ಯಕ್ಷ

- pavan

27 Jan 2025, 11:27 am
Download App from Playstore: