ಕವನದ ಶೀರ್ಷಿಕೆ ಗಣರಾಜ್ಯೋತ್ಸವ.


ಹೂದಳ.ಗಳಂತೆ ರಾಜ್ಯಗಳ ಬಂಧಿಸಿದೆ ಭಾರತ,
ಜಗಕೆ ಗುರುವಾಗಿದೆ ಒಂದೇ ಮಾತರಂ ಗೀತೆ ಹಾಡುತ.

ವಿವಿಧ ಧರ್ಮಗಳ ನೆಲೆಗೆ ದೇಶವೇ ತೊಟ್ಟಿಲು,
ತಾಯ ಸ್ಥನ್ಯಪಾನದ ಮಂತ್ರವೇ ಏಕತೆಯ ಸಾಲು.

ಪರಕೀಯರ ಸೆರೆಯಿಂದ ಮುಕ್ತರಾದ ಭಾರತೀಯರಿಗೆ,
ಬೇಕಿತ್ತು ಮಾರ್ಗ ಸೂಚಿ ಭವಿಷ್ಯದ ಭದ್ರತೆಗೆ.

ನೇತಾರರೆಲ್ಲ ಸೇರಿ, ದೇಶ ವಿದೇಶಗಳಿಗೆ ಹಾರಿ,
ಜ್ಞಾನಾಮೃತವ ಹೀರಿ, ಸುಗಮಗೊಳಿಸಿದರು ಸಾರ್ವಭೌಮತ್ವದ ದಾರಿ.

ಮತದಾನ ನಿರ್ಧರಿಸುವುದು ಪ್ರಜೆಗಳ ಪ್ರತಿನಿಧಿಗಳನ್ನ,
ಸಂವಿಧಾನ ನಿರ್ದೇಶಿಸುವುದು ಸರ್ವರ ಕಲ್ಯಾಣಕ್ಕಾಗಿ ದುಡಿಯುವುದನ್ನ.

ಕೋಟಿ ಕೋಟಿ ತಾರೆಗಳ ಸೂರಿಗೊಬ್ಬರೇ ರಾಷ್ಟ್ರಪತಿ,
ಸ್ವರಾಜ್ಯದ ನೆನಪಿನ ದಿನದಂದು ಜಾರಿಯಾದ ಸುವ್ಯವಸ್ಥಿತ ಕಾನೂನುಗಳ ಹೊತ್ತಿಗೆಯೇ ಸರ್ಕಾರದ ಅಧಿಪತಿ.

ತಲೆಬಾಗಿ ನಮಿಸುವ ನಾಡಗುಡಿಗೆ,
ಉಕ್ಕುರಳ ಜಯ ಘೋಷ ಗಣರಾಜ್ಯೋತ್ಸವಕ್ಕೆ,
ಪ್ರಸ್ತಾವನೆ ಪುಟದಂತೆ ಸಾಗುವ ದೇಶದ ಏಳಿಗೆಗೆ.

- nagamani Kanaka

26 Jan 2025, 10:49 pm
Download App from Playstore: