ಹೇಗೆ ಬಣ್ಣಿಸಬಲ್ಲಿರಿ
ಹೇಗೆ ಬಣ್ಣಿಸಬಲ್ಲಿರಿ ಗುಣಗಳನ್ನು
ಅವರು ಸಜ್ಜನರು ಇವರು ದುಷ್ಟರೆಂದು
ಶಕುನಿ ಇಲ್ಲದಿದ್ದರೆ ಮಹಾಭಾರತ ಎಲ್ಲಿ ನಡೆಯುತ್ತಿತ್ತು
ಧರ್ಮ ಅಧರ್ಮಗಳಲ್ಲಿ ವ್ಯತ್ಯಾಸ ಎಲ್ಲಿರುತಿತ್ತು
ಮಂತರೆ ಇಲ್ಲದಿದ್ದರೆ ರಾವಣನ ಅಟ್ಟಹಾಸಕ್ಕೆ ಕೊನೆ ಎಲ್ಲಿರುತಿತ್ತು
ರಾಮನ ಅವತಾರಕ್ಕೆ ಅರ್ಥವೆಲ್ಲಿರುತಿತ್ತು
ಹೇಗೆ ಬಣ್ಣಿಸಬಲ್ಲಿರಿ
ಅಗ್ನಿಯಷ್ಟು ಶುದ್ಧಳಾದ ಸೀತೆಗೆ ಅಪಮಾನ ಹೊರಿಸಿದ ರಾಮ ದೇವರೆಂದು
ಜೂಜಿಗೆ ಪತ್ನಿಯನ್ನು ಪಣವಿಟ್ಟ ಪಾಂಡವರು ಧರ್ಮದ ಪಾಲಕರೆಂದು
ನಾನು ಒಳ್ಳೆಯವಳು ನಾನು ಧರ್ಮ ಪಾಲಿಸುವವಳು
ಎಂದು ಹೇಗೆ ಹೇಳಬಲ್ಲಿರಿ
ನಿಮ್ಮ ಅಂತರಂಗದಲ್ಲೇ ಯುದ್ಧ ನಡೆಯುತ್ತಿರುವಾಗ
ನಿಮ್ಮ ಅರಿಷಡ್ವರ್ಗಗಳ ಮೇಲೆ ಹಿಡಿತ ಇಡಲಾಗದವರು
ಹೇಗೆ ಅಳೆಯಬಲ್ಲಿರಿ ಹೊರಗಿನ ಪ್ರಪಂಚವನ್ನು
- rashmi maladkar
23 Jan 2025, 06:53 pm
Download App from Playstore: