ನಾನು

ನಾನು ನಾನು ಎಂದು ಅಹಂಕಾರ ಪಡುವ ನೀನು
ಮರೆತುಹೋದೆಯಾ ನೀನೊಂದು ಕಣವೆಂದು
ನೀನೊಂದು ಆತ್ಮವೆಂದು, ಆತ್ಮವೇ ಸತ್ಯವೆಂದು
ನಾನು ಒಂದು ಸುಳ್ಳು ಎಂದು

ನಿಮಷಗಳು ಗಂಟೆಗಳಾಗಿ, ಗಂಟೆಗಳು ದಿನಗಳಾಗಿ,
ದಿನಗಳು ವರುಷಗಳಾಗಿ, ನಾನು ಎಂಬುದು ಹುಟ್ಟಿ,
ನಾನು ಎಂಬುದು ಹೆಮ್ಮರವಾಗಿ ಬೆಳೆದು,
ನಾನು ಎಂಬುದು ಅಸ್ಥಿತ್ವವಾಗಿ
ಒಂದು ದಿನ ಅಸ್ಥಿತ್ವ ನಾಶವಾಗಿ ಅಜೀವವಾಗಿ ಹೋದರೂ
ಮರೆತು ಹೋದೆಯಾ
ನೀನೊಂದು ಆತ್ಮವೆಂದು, ಆತ್ಮವೇ ಸತ್ಯವೆಂದು
ನಾನು ಒಂದು ಸುಳ್ಳು ಎಂದು

ಜೀವನದ ಜಂಜಾಟದಲ್ಲಿ ನಾನು ನಾನೆಂಬ ಅಹಂ ಬೆಳೆದು
ಆಸೆ ದುರಾಸೆಯಾಗಿ, ದುರಾಸೆ ನಿರಾಸೆಯಾಗಿ,
ಸೋತು ನೊಂದು ಬೆಂದರು
ಮರೆತು ಹೋದೆಯಾ
ನೀನೊಂದು ಆತ್ಮವೆಂದು, ಆತ್ಮವೇ ಸತ್ಯವೆಂದು
ನಾನು ಒಂದು ಸುಳ್ಳು ಎಂದು

ನನ್ನವರನ್ನು ಪಡೆದುಕೊಂಡು ಸಂತೋಷವಾಗಿ
ನನ್ನವರನ್ನು ಕಳೆದುಕೊಂಡು ಕಣ್ಣೀರು ಹರಿಸಿ
ಮತ್ತೆ ಜೀವನ ಚಕ್ರದಲ್ಲಿ ಒಂದು ಕಣವಾಗಿ ತಿರುಗಿ
ಎಲ್ಲೋ ಕಳೆದು ಹೋದರೂ
ಮರೆತು ಹೋದೆಯಾ
ನೀನೊಂದು ಆತ್ಮವೆಂದು, ಆತ್ಮವೇ ಸತ್ಯವೆಂದು
ನಾನು ಒಂದು ಸುಳ್ಳು ಎಂದು

- rashmi maladkar

23 Jan 2025, 06:46 pm
Download App from Playstore: