ಕವನದ ಶೀರ್ಷಿಕೆ ಕರುಳ ದನಿ.
ಬತ್ತಿದ ಭಾವಕೆ ಕೊಳಲ ನಾದವಾದೆ,
ಔಷಧಿ ಇರದ ಗಾಯಕ್ಕೆ ಮುತ್ತಿನ ಹನಿಯಾದೆ.
ಉದರದ ಕಿಚ್ಚಿಗೆ ತುಂತುರು ಮಳೆಯಾದವನೆ,
ಅಮ್ಮನ ಕರುಳ ದನಿ ನೀನೇ ಮಗನೆ.
ಬಡತನದ ಸೂರಿಗೆ ಬಂದ ಚಂದ್ರನೇ ಬಹುಮಾನ,
ದುಃಖವ ಮರೆಸುತ್ತಿತ್ತು ನಿನ್ನ ಕಿಲಕಿಲ ನಗೆಯ ನರ್ತನ.
ಸೋರುವ ಕುಂಭದಂತೆ ನಿಲ್ಲದ ಕಷ್ಟಗಳು,
ಕರುಳ ಬಳ್ಳಿಯನಗಲಿಸಿದವು ಆ ದಿನಗಳು.
ಬಿಡುಗಾಸಿರದ ಸಮಯದಲ್ಲಿ ಬೆಳೆದಿರುವಿರಿ ನೀವ್,
ನೆರೆಹೊರೆಯವರ ಪ್ರೀತಿಯ ಆಶ್ರಯದಲ್ಲಿ.
ಪೋಷಿಸಿರುವೆ ಕಂದಮ್ಮ ಹಸಿವಿದ್ದರೂ ಕೈಚಾಚದೆ,
ನೀವ್, ಸಾಧಿಸುವ ಛಲದಿ ಸಾಗಬೇಕು ಸ್ವಾಭಿಮಾನ ಬಿಡದೆ.
ದಿಟ್ಟ ನೋಟವು ಪ್ರಾರ್ಥಿಸುವ ಮಗು ನೀನಾಗು,
ಮುಪ್ಪಾದವರ ಸಲಹೋ ಸರದಾರನಾಗು.
ನ್ಯಾಯ ಮಾರ್ಗದಿ ನಡೆದು ನಿಸ್ವಾರ್ಥಿಯಾಗು,
ದುರ್ಗುಣಗಳ ದೂರವಿಟ್ಟು ನೃಪತುಂಗನಾಗು.
ಧನ ಕನಕಾದಿಗಳ ಅಧಿಪತಿಯಾದರು ನೀ ಮಾನವನಾಗಿರು,
ಸದಾ ಸಹಕರಿಸಿ ಹಾರೈಸಿದವರ ಮರೆಯದಿರು.
ಸೌರಭದ ಸುಮದಂತೆ ಸೂಕ್ಷ್ಮವಾಗಿರು ಕಂದ,
ನಿನ್ನ ಬಾಳ ಪಯಣದ ಸುಪ್ರಭಾತವೆ ಕೊಡುವುದು ನನಗೆ ಆನಂದ.
- nagamani Kanaka
14 Jan 2025, 09:16 pm
Download App from Playstore: