ಕವನದ ಶೀರ್ಷಿಕೆ ಉತ್ತರಾಯನದ ಪುಣ್ಯಕಾಲ.
ಉತ್ತರಾಯನದ ಮಕರ ರಾಶಿಗೆ ಪ್ರವೇಶಿಸುವ ಭಾಸ್ಕರ,
ಕೊರೆಯುವ ಚಳಿಯ ಮಾಯ ಮಾಡಿ ಪೊರೆಯುವನು ನೇಸರ.
ಸತ್ಕಾರ್ಯಗಳಿಗೆ ಶುಭ ಮುಹೂರ್ತ ಕಾಲವಿದು,
ದವಸ ಧಾನ್ಯಗಳ ರೈತ ಮನೆಗೆ ಸ್ವಾಗತಿಸಿ ಸಂಭ್ರಮಿಸುವ ಹಬ್ಬವಿದು.
ವಿವಿಧ ಹೆಸರುಗಳಿಂದ ಆಚರಿಸುವರು ಸಂಕ್ರಮಣವನ್ನ,
ದನಕರುಗಳ ಸಿಂಗರಿಸಿ ಸೌಹಾರ್ದದಿ ಆಯೋಜಿಸುವರು ಸ್ಪರ್ಧೆಗಳನ್ನ.
ನಾರಿಯರು ಮನೆ ಮನೆಗೆ ಹಂಚುವರು ಎಳ್ಳು ಬೆಲ್ಲ,
ವಿನಿಮಯದ ಹಾರೈಕೆಗಳಿಂದ ತಿಳಿಗೊಳವಾಗುವುದು ಮನವೆಲ್ಲ.
ಕಬ್ಬಿನ ರಸದಂತಿದ್ದರೆ ಎಲ್ಲರ ಮನಸ್ಸು,
ಶರದಂತೆ ಬರುವ ಸಿಹಿ ನುಡಿಗಳದ್ದೇ ಸೊಗಸು.
ಗುಸುಗುಟ್ಟಲಿ ಪುರಾಣ ಕಥೆಗಳ ಸಾರ ಹೃದಯದಲ್ಲಿ,
ಉತ್ತರಾಯನದ ಪುಣ್ಯವೆಲ್ಲ ಸರ್ವರಿಗೂ ಲಭಿಸಲಿ.
ರಚನೆ ಶ್ರೀಮತಿ ನಾಗಮಣಿ h b
GHPS Dharmapur.
- nagamani Kanaka
14 Jan 2025, 08:43 am
Download App from Playstore: