ಕವನದ ಶೀರ್ಷಿಕೆ ಪ್ರೀತಿಯ ಸೋಲು.



ಕಣ್ಮರೆಯಲ್ಲಿ ಕೈ ಹಿಡಿದವರು,
ಬೆನ್ನೆಲುಬಾಗಿ ನಿಂತು ಸಲಹಿದರೂ.

ಸದ್ಗುಣಗಳ ಐಸಿರಿಗೆ ಸೋತು,
ಮಾತಿನ ಮಾಧುರ್ಯಕ್ಕೆ ಮನ ಒಂದಾಯಿತು.

ವಾತ್ಸಲ್ಯದ ಸೆಳೆತ,
ಹೆಚ್ಚಿಸುವುದು ಹೃದಯ ಬಡಿತ.

ಕಣ್ಣಂಚ ನೀರು,
ನೆನಪುಗಳೊಳಗೆ ಸುರಿಯುವ ಪನ್ನೀರು.

ಕರುಳೊಳಗೆ ಕರಗಿರುವ ಕವಿಯೂ,
ಒಡಲ ತಾಪದಿ ಹೊರಹೊಮ್ಮುವ ಹೊಗೆಯು.

ಆರ್ಭಟಿಸೋ ಅಂತರಾಳದ ಸ್ನೇಹ,
ಕೇಳದೆ ಕೊಡುವುದು ವಿರಹ.

ಸಮತೆ ಇರದೆ ಕೂಡಿದ ನಂಟು,
ಬಿಡಿಸುವುದು ಬಾಂಧವ್ಯದ ಗಂಟು.

ಹಸುಳೆಯಂತೆ ಚಿಗುರೋಡೆದ ಪ್ರೀತಿ,
ಮರವಾಗಿ ಬಿರಿಯುವುದೆಂಬ ಭೀತಿ.

ವಾಸ್ತವಕ್ಕೆ ಸಿಲುಕದ ವಿಷಯ,
ಸ್ತುತಿಸುವ ನೋವಿಗೆ ಹೇಳದು ವಿದಾಯ.

ನಮ್ಮವರೊಂದಿಗೆ ಇರಲಾಗದ ಕ್ಷಣ,
ಜಿಗಣೆಯಂತೆ ನರಳಿಸುವುದು ಪ್ರತಿದಿನ.

ಅವರಿಗೆ ಇರದ ಕನವರಿಕೆ,
ನಮ್ಮೆದೆಯ ಚಿವುಟುವುದು ಏಕೆ?

ಸಂತಸದ ಹೊನಲು ಮರೆಯಾದಾಗ,
ಪುಟಿಯದು ಪ್ರೀತಿಯ ಅನುರಾಗ.

ಕೋಟಿ ಜನರ ಮಧ್ಯೆಯೂ ಸಿಕ್ಕರೆ ಒಲವು,
ಆಗ ಕಾಣಬಹುದು ಮಂದಹಾಸದ ಚೆಲುವು.

- nagamani Kanaka

13 Jan 2025, 07:44 am
Download App from Playstore: