ಕವನದ ಶೀರ್ಷಿಕೆ ವಿವೇಕದ ವೀಣೆ.



ಲೋಕದ ತುಡಿತಗಳನರಿತ ಲೋಕೇಶ್ವರ,
ಭ್ರಾತೃತ್ವ ಬೆಸೆದ ನರೇಂದ್ರರು ಅಜರಾಮರ.

ದುರ್ಬಲರ ಸೇವೆಯ ಸಾರಥಿಯಾಗಿ,
ಭೀಕರ ಬರಗಾಲದಿ ಹಸಿವು ನೀಗಿಸಿದ ತ್ಯಾಗಿ.

ಪರಮಹಂಸರ ಶಿಷ್ಯರಾಗಿ,
ಸನ್ಮಾರ್ಗದಿ ನಡೆದ ಶಿವಯೋಗಿ.

ಗೂಡಾಚೆ ವಿಹರಿಸೋ ನಿಮ್ಮ ಆತ್ಮದ ಏಕಾಗ್ರತೆ,
ಗುಡುಗ ಸೀಳಿ ಸಾಗುವವರಿಗೆ ಹಣತೆ.

ಗಂಗಾಸುತನ ಕರುನಾಡ ಪ್ರವಾಸ,
ಒಡೆಯರ ಗರುಡನಾಗಿ ನುಡಿಯಿತು,
ಶಾಲೆಗಳ ತೆರೆಸಿ ಕೊಡಿಸಿ ವಿದ್ಯಾಭ್ಯಾಸ.

ಗುರುತಿರದ ಭಾರತೀಯ ಸಂತನ ಭಾಷಣ,
ಗಳಿಸಿತು ವಿಶ್ವಮನ್ನಣೆಯನ್ನ.

ಮುನ್ನಡೆವ ಹಾದಿ ಮುಳ್ಳಿನ ಹಾಸಿಗೆ ಇದ್ದರೂ,
ಬಗ್ಗದೊಳ್ ಕುಗ್ಗದೆ ನಡೆದರೆ ನಮಗೆ ಸಮನಾರು!.

ಸರ್ವ ಮಸ್ತಕಗಳಿಂದು ಮಾಹಿತಿಯ ಕಣಜ,
ವಿವೇಕದ ವೀಣೆ ನುಡಿಯುತ್ತಿರಲಿ ಮದವೇರದೆ ಸಹಜ.

ಧ್ಯಾನ ಸುದೆಯಾಗಿ ಹೃದಯದಲ್ಲಿ ನೆಲೆಸಿ,
ಉದ್ದರಿಸಿದರು ಮನಗಳ ಗುರೂ ಭಕ್ತಿಯನುಳಿಸಿ.

- nagamani Kanaka

12 Jan 2025, 04:59 pm
Download App from Playstore: