ಸರಸ್ವತಿ ನಮನ

ಮಂದಸ್ಮಿತ ಶೋಭಿತೆ
ಹಂಸವಾಸಿನಿ ಅಲಂಕೃತೆ

ವೀಣಾಪಾಣಿ ಜ್ಞಾನವಾಣಿ
ವಿರಿಂಚಿ ವಲ್ಲಭೆ ತಮೋಹರಿಣಿ

ಚತುರ್ಭುಜೆ ಧವಳಧಾರಿಣಿ
ಚತುರ್ಮುಖ ಶ್ರೀವಾಸಿನಿ

ತಮೋಹರಿ ಜ್ಞಾನಸಿರಿದಾಯಿನಿ
ಸರಸ್ವತಿ ಗುಪ್ತಗಾಮಿನಿ ವಾಣಿ

ವಿದ್ಯಾದಾಯಿನಿ ಬುದ್ಧಿದಾಯಿನಿ
ಸಿದ್ದಿಪ್ರದಾಯಿನಿ ಮತಿದಾಯಿನಿ

ನಮೋ ನಮೋ ತಾಯಿ ಶಾರದೆ
ಜಗಪೂಜಿತೆ ಸರ್ವ ವಿಶಾರದೆ

******?️******?️******

ಇಂದು ಸರಸ್ವತಿ ಆವಿರ್ಭವಿಸಿದ ದಿನ
ವೀಣಾಪಾಣಿಯ ಸ್ಮರಣೆ ಮಾಡೋಣ
*******************************

ಜಿ.ಹೆಚ್.ಸಂಕಪ್ಪ
೦೨.೦೨.೨೦೨೫

- ಕವಿಕೂಸು

07 Jan 2025, 10:32 pm
Download App from Playstore: