ಅವನಿ
ಅವನಿ ಎಂಬುದರ ಅರ್ಥ ಧರಣಿ,
ಧ್ರವ್ಯನ್ಯದಿ ವರ್ಗದಲ್ಲಿ ಮೂಡಿಬಂದ ಸರಣಿ;
ಭೂಮಿಯ 53 ಪದಗಳಲ್ಲೊಂದು ಅವನಿ,
ನಾವು ಜೀವಿಸುತ್ತಿರುವ ಈ ಭೂಮಿ;
ಅವ್ ಎನ್ನಲು ಇದುವೇ ಸಂರಕ್ಷಿಣಿ,
ತಾಯಿಯ ರೂಪ ಈ ನಮ್ಮೆಲ್ಲರ ತರುಣಿ;
ಕೋಲಾರದ ಒಂದು ಬೆಟ್ಟದ ಹೆಸರು ಅವನಿ,
ಅವನಿಸುತೆ ಸೀತೆಗೆ ಇದುವೇ ಜನನಿ;
ಎಲ್ಲವನ್ನು ಸಹಿಸಿಕೊಂಡು ಕ್ಷಮಿಸುವ ಕರುಣಿ,
ವಿವಿಧ ಅರ್ಥ ತುಂಬಿರುವ ಪದ ಈ ಅವನಿ!
-Rakshitha M Umadi
- Rakshitha M Umadi
01 Jan 2025, 04:44 pm
Download App from Playstore: