ಕವನ ನವ ವರ್ಷ..
ಭೂರಮೆಯ ಸುಪ್ತ ಬೆಳಕು,
ಕಿತ್ತೊಗೆಯಲಿ ಎಲ್ಲರೆದೆಯ ಕೊಳಕು.
ರಥವೇರಿ ಬರುತಿಹ ಕನಸುಗಳ ನೋಡಿ
ಕರ್ನಾಟ ಬಲದಿಂದ ಜಯಭೇರಿ ಹಾಡಿ.
ಮನವೊಂದು ಭಾವದ ಕಡಲು,
ನವ ವರ್ಷ ತುಂಬಲಿ ಮಲ್ಲಿಗೆಯ ಘಮಲು.
ಕಹಿ ಕೊನೆಯದಾಗಿ ಸಿಹಿ ಸುದ್ದಿ ಹರಡಲಿ,
ಸಾರ್ಥಕತೆಯ ಜೀವನದ ಪಯಣ ಮುಂದುವರೆಯಲಿ.
ಸಂಪ್ರದಾಯ ನಿಷ್ಠೆಯ ಆಚರಣೆ,
ಮನುಜರಿಗೆ ಮುದ ನೀಡುವ ಶಿವರಾತ್ರಿಯ ಜಾಗರಣೆ.
ಕಲಹಗಳ ಕಳಚಿಟ್ಟು ಕುಪ್ಪಳಿಸೊ ಭರದಲ್ಲಿ,
ಹೊಸ ವರ್ಷ ಬರಡಾಯ್ತು ಸಿಡಿ ಮದ್ದ ಹೊಗೆಯಲ್ಲಿ.
ಬಾಂದಳದ ತಾರೆಗಳಿಗೆ ಬೆಳದಿಂಗಳಊಟ,
ಮೈಗೂಡಲಿ ನಾಳೆ ಸಹ ಬಾಳ್ವೆ ಪಾಠ.
ಹೊಸ ವರ್ಷ ಬದುಕಿನ ಭವಣಿಗಳ ನೀಗಿ,
ಸಾಕ್ಷರತೆ ಫಲಿಸಲಿ ಸನ್ನಡತೆಗಾಗಿ.
ಹ್ಯಾಪಿ ನ್ಯೂ ಇಯರ್ ಹೇಳುವ ಸಂಭ್ರಮದಂದು,
ಹಸನ್ಮುಖಿಯಾಗಿ ಮನಸೇರು ಬಂದು.
ಹೊಳೆವ ಮುತ್ತಾಗಲಿ ಹೊಸ ವರ್ಷದ ಆಗಮನ,
ಲೇಖನಿಗೆ ನೆನಪಾಗಲಿ ನಾವ್ ಪಣತೊಟ್ಟ ದಿನ.
- nagamani Kanaka
01 Jan 2025, 05:52 am
Download App from Playstore: