* ನಗ ಬೇಕಾ? *
ನಕ್ಕು ಬಿಡು
ನಯವಂಚಕರ ನಡುವೆ.
ನಡೆಯದು ನಿನ್ನ ನಿಯತ್ತು
ನಕ್ಕು ಬಿಡು
ನೆಮ್ಮದಿ ಇರದ ಜಾಗದಲ್ಲಿ.
ದೇಹ ರಚಿ ಕಾಣದು
ನಕ್ಕು ಬಿಡು
ನಾನು ನನ್ನದು ಎನ್ನುವರ ಮುಂದೆ.
ನಾವು ಅವರ ಅಂದಕಲ್ಲ
ನಕ್ಕು ಬಿಡು
ನೆರಳನ್ನ ಅಳಿಸುವವರ ಹಿಂದೆ.
ನುಕುವರು ಮುಳ್ಳಿನ ಮೇಲೆ
ನಕ್ಕು ಬಿಡು
ನಾಲಿಗೆಗೆ ಮೋಸ ಮಾಡುವರ ಮಾತಲ್ಲಿ.
ನಿನ್ನ ಚರ್ಮ ಚಪ್ಪಲಿ ಯಾದಿತು
ನಕ್ಕು ಬಿಡು
ನಿದ್ರೆಸುವಂತೆ ಗೊರಕೆ ಹೊಡೆಯುವರ ಉಸಿರಿಗೆ.
ನಿದ್ರೆ ಇಲ್ಲದಂತೆ ಮಾಡಿಯಾರು
ನಕ್ಕು ಬಿಡು
ನನ್ನಿಂದ ಬೆಳದಿದ್ದು ನೀನು ಎಂದಾಗ.
ಬೆಳೆಗೆ ಬೆಂಕಿ ಇಟ್ಟಾರು
ನಕ್ಕು ಬಿಡು
ಬೇಕೆಂದಾಗ ಹೊಗಳಿ ಬೇಡವಾದಾಗ.
ಕಥೆ ಕಟ್ಟಿ ಹರಿಕಥೆ ಮಾಡವರು.
ನಕ್ಕು ಬಿಡು
ದಾರಿ ತಪ್ಪಸಿ ದೊರೆಯಾದವರೆದರು.
ಕೊನೆಯ ದಾರಿಯೊ ಮುಚ್ಚಿಯಾರು.
-ಈಶ, ಎಂ.ಸಿ.ಹಳ್ಳಿ
- ಈಶ, ಎಂ.ಸಿ.ಹಳ್ಳಿ
04 Jan 2015, 08:42 am
Download App from Playstore: