ಯುಗದ ಕವಿ ಜಗದ ಕವಿ
ಯುಗದ ಕವಿ ಜಗದ ಕವಿ
( ಕುವೆಂಪು )
ಜನನ : 29.12.1904 ಗುರುವಾರ
ವಿವಾಹ: 30.04.1937ಶುಕ್ರವಾರ
ನಿಧನ : 11.11.1994 ಶುಕ್ರವಾರ
*************
ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ
ಮಲೆನಾಡಿನ ಮಳೆನಾಡಿನ
ಕವಿಶೈಲದಲಿ ಅಮಲನ ಕತೆಯ
ಕೊಳಲಲಿ ಕನ್ನಡ ಕಂಪಕಸ್ತೂರಿಯ
ಪಕ್ಷಿಕಾಶಿಯಲಿವರ ಕಾವ್ಯವಿಹಾರ
ಬೊಮ್ಮನಹಳ್ಳಿಯ ಕಿಂದರ ಜೋಗಿ
ಬಾರಿಸಿದರು ಕನ್ನಡ ಡಿಂಡಿಮವ
ಕತೆ ಕಾದಂಬರಿ ಕವನಗಳಲಿವರು
ಕುವೆಂಪು ಕಾವ್ಯನಾಮದಲಿ ಕನ್ನಡ
ಪಾಂಚಜನ್ಯದ ಕಹಳೆಯೂದಿದರು
ಹೇಮಾವತಿ ಮದುಮಗಳೊಂದಿಗೆ
ಕವಿಲಗ್ನವಾಗಿ ಪ್ರೇಮಕಾಶ್ಮೀರದಲಿ ವಿಹರಸಿ
ಪೂರ್ಣಚಂದ್ರತೇಜಸ್ವಿ ಕೋಕಿಲೋದಯ ಚೈತ್ರ
ಇಂದುಕಲಾ ತಾರಿಣಿಯರು ಜನಿಸಿದರು
ಮಲೆನಾಡಿನ ಚಿತ್ರಗಳ ಚಿತ್ರಿಸಿದರು
ಕನ್ನಡ ಸಾಹಿತ್ಯಲೋಕದ ಸಾಗರದಲಿವರ
ನೆನಪಿನ ದೋಣಿಯ ವಿಹಾರದಲಿ
ನಾಡಗೀತೆಯ ಮಂತ್ರಾಕ್ಷತೆಯಲಿ
ಜೈ ಭಾರತ ತನುಜಾತೆ ಜಯಹೇ
ಕರ್ನಾಟಕ ಮಾತೆ ಹಾಡಿದರು
ನುಡಿರಾಣಿಯ ಗುಡಿ ಕುವೆಂಪು ಲೋಕವು
ಗುರುವಿನೊಡನೆ ದೇವರ ಕಡೆಗೆ ಸಾಗಿತು
ಕನ್ನಡವೇ ಕುವೆಂಪು ಕಂಪು ಇಂಪು ಸೊಂಪು
ಶಿಲಾತಪಸ್ವಿಯಲಿ ಶೂದ್ರತಪಸ್ವಿಯ ರಕ್ತಾಕ್ಷಿ
ಶ್ರೀ ರಾಮಾಯಣ ದರ್ಶನಂ ದರ್ಶಿಸಿದರು
ವಿಶ್ವ ಮಾನವ ಯುಗದಕವಿ ಜಗದಕವಿ
ರಾಷ್ಟ್ರಕವಿ ಕರ್ನಾಟಕ ರತ್ನ ಕುವೆಂಪು
ಜ್ಞಾನಪೀಠದಗ್ರಜನ ಜನುಮದಿನವಿಂದು
ಏನಾದರಾಗು ಮೊದಲು ಮಾನವನಾಗು
ಜಗಕೆ ಸಾರಿದ ಯುಗಪುರುಷನಿಗೆನ್ನಪ್ರಣಾಮ
********ಕುವೆಂಪು ಜನ್ಮ ದಿನ***********
ಜಿ.ಹೆಚ್. ಸಂಕಪ್ಪ
ಮೈಸೂರು
೨೯.೧೨.೨೦೨೪
- ಕವಿಕೂಸು
29 Dec 2024, 12:34 pm
Download App from Playstore: