"ಮಹಿಷಿಯ ಮನದಾಳದ ಮಾತು."



ಮಹಿಷಿ,ಕೊಟ್ಟಿಗೆಯಲ್ಲಿ ತಿಂದ ಮೇವನ್ನು ನಮುರು ಆಕುತ್ತ, ತನ್ನ ಕರುವನ್ನು ನೋಡುತ್ತ ಮುಂಜಾನೆಯಿಂದ ಇಲ್ಲಿಯವರೆಗೂ ತಾನು ಕಳೆದ ದಿನದ ಯೋಚನೆಯ ಪರಿ.

ದೇವಾ ನಿನ್ನ ನೋಡಲೆಂದು ಬಹುದಿನಗಳ ಆಸೆಯಿತ್ತು.
ಸಮಯದ ಕೊಡುಗೆ ಇಂದು, ನನಗಾಗೆ ಬಂದಂತಿತ್ತು.

ನನಗೊಬ್ಬ ಕಿರಿಮಗ ಇರುವ, ನನ ಕಂಡರೆ ಓಡೋಡಿ ಬರುವ.
ಅವನಲ್ಲೇ ಮೇಯುತರಿರಲಿ ನಾ ಬರುವೆ ನಿನ ದೀಕ್ಷೆಯಲಿ.

ಗುಡಿ ಸುತ್ತ ಜನಗಳು ಜನಗಳು.
ನಾ ಬಂದೆ ನಿನ್ನನು ನೋಡಲು.
ಯಾರೋ ಒಬ್ಬ ಮನುಜಾನಲ್ಲಿ
ನನ್ನೊಡೆದ ಬಿದುರಿನ ಕೋಲಲಿ.
ರಪ್ಪೆಂದೂ ವಡೆದಾ ದೇವ.
ಹೋದಂಗಾಯ್ತು ನನ್ನ ಜೀವ.

ಅಮ್ಮಾ ಎಂದು ನನೇಗೆ ಕೂಗಲಿ.
ನಾ ಮೂಕ ಯಾರನು ದೂರಲಿ.

ಅಲ್ಲೇ ಕುಳಿತೆ ಕಸದ ಬಳಿಯಲಿ.
ತಿಂದೆ ಕಸವನೆ, ಹೊಟ್ಟೆಯ ಹಸಿವಲಿ.

ಹಾಲು, ತುಪ್ಪ, ಮೊಸರು,ಬೆಣ್ಣೆ ನಿನ್ನ ಪೂಜೆಗೆ.
ನಿನ್ನ ನೋಡುವ ಭಾಗ್ಯವಿಲ್ಲ ನನ್ನ ಪಾಲಿಗೆ.

ನಾನು ಹುಟ್ಟಿದೆ, ನನ್ನ ಪರಪಂಚ ಹುಟ್ಟಿತು.
ನನ್ನ ಪರಪಂಚದಲ್ಲಿ ನನ್ನ ಉಸಿರು ಹುಟ್ಟಿತು.
ನನ್ನ ಹಿರಿಮಗನೆಂಬ ಆಸೆ ಹುಟ್ಟಿತು.
ಅವನನ್ನು ವಿಧಿ ನಿನ್ನ ಬಲಿದಾನಕ್ಕೆ ಕೊಡುಗೆ ಕೊಟ್ಟಿತ್ತು.
ನನ್ನ ಉಸಿರು ಹೋದಂಗಾಗಿತ್ತು.
ನನ್ನ ಹಸಿವು ಹಸಿರನು ತಿಂದಿತ್ತು.
ನಮುರು ಆಕುತ್ತ ನೋವನು ಮರೆಸಿತ್ತು.

ಆದರೆ...
ನನಗೊಬ್ಬ ಕಿರಿಮಗ ಇರುವ
ನನ ಕಂಡರೆ ಓಡೋಡಿ ಬರುವ.
ಇರುವೆಯೋ, ಇಲ್ಲವೋ ನಿನ್ನನು ಬೇಡುವೆ.
ನೀ ಇದ್ದರೆ, ಅವನನು ನೋಡದೆ ಇರುವೆ!

- Srikanth G

25 Dec 2024, 09:49 pm
Download App from Playstore: