ನೊಂದ ತಾಯಿ
ತಾಯಿಗೆ ತ್ರಾಸ ಕೊಡಬೇಡ ಮಗ
ತಡ್ಕೋ ಶಕ್ತಿ ಇಲ್ಲದ ಜೀವಿ ಅದು...
ನಿನ್ನ ಸ್ವಾರ್ಥಗೋಸ್ಕರ ತಾಯಿಗೆ ತ್ರಾಸ ಕೊಟ್ಟು ಜಾಲಿ ಆಗಿ ಇರಬೇಡ ಮಗ
ತಡ್ಕೋ ಶಕ್ತಿ ಇಲ್ಲದ ಜೀವಿ ಅದು...
ತಾಯಿಗೆ ಪ್ರೀತಿ ತೋರಿಸ ಬದಲು ತ್ರಾಸ ಕೊಟ್ಟರೆ ಆ ಜೀವಿ ನೊಂದಬಿಡುತ್ತದೆ
ತಡ್ಕೋ ಶಕ್ತಿ ಇಲ್ಲದ ಜೀವಿ ಅದು...
ಅಮ್ಮ ಅಂತ ಪ್ರೀತಿ ತೋರಿಸು ತಾಯಿಗೆ ಕಷ್ಟ ಸುಖ ಕೇಳು ಅದರ ಬದಲಿಗೆ ಕಿರಿ ಕಿರಿ ಮಾಡಬೇಡ
ತಡ್ಕೋ ಶಕ್ತಿ ಇಲ್ಲದ ಜೀವಿ ಅದು...
ತಾಯಿ ತೀರಿದರೇ ಯಾವ ಹಳ್ಳಿ ನಾಯಿಯು ಕೇಳಲ್ಲ ನಿನಗೆ ತಾಯಿ ಇರಷ್ಟ ದಿವಸ ಚೆನ್ನಾಗಿ ನೋಡ್ಕೋ ಮಗ
ತಡ್ಕೋ ಶಕ್ತಿ ಇಲ್ಲದ ಜೀವಿ ಅದು....
ತಾಯಿಗೆ ಜೋರಾಗಿ ಬಾಯಿ ಬಂದಾಗೇ ಬೈಯಬೇಡ
ಯಾರು ಜೊತಿಗೆ ಇರದೇ ತಾಯಿ ನಿನ್ನ ಜೊತೆ ಇದ್ದಳು ಅಂತ ಮರೀಬೇಡ ಮಗ ತ್ರಾಸ ಕೊಡಬೇಡ ಮಗ
ತಡ್ಕೋ ಶಕ್ತಿ ಇಲ್ಲದ ಜೀವಿ ಅದು....
-ಅಂಬಿಕಾ ಕುಲಕರ್ಣಿ
- Ambika Kulkarni
12 Dec 2024, 11:30 pm
Download App from Playstore: