ಸುಸ್ಥಿರ ಭವಿಷ್ಯ



ಖುಷಿ ಕೊಡದು ಕುಟುಂಬಕ್ಕೆ ವಿಶೇಷ ಚೇತನರ ಜನನ,
ಹೆತ್ತ ತಾಯಿ ಉತ್ತರಿಸಲಾಗದೆ ಅನುಭವಿಸುವರು ನೋವನ್ನ.

ಮುಜುಗರದೀ ಶಾಲೆಗೆ ಸೇರುವ ಮಕ್ಕಳು,
ಮಿಂಚಂತೆ ಬೆಳೆಯಲು ಕವಿಯುವುದು ನಿರುದ್ಸಾಹದ ಕಾರಿರುಳು.

ಹಿಂಜರಿಯದೆ ಮುಂದಾಗಿರಿ ಮರೆತು ನ್ಯೂನತೆಯ,
ಸಂಘ ಜೀವಿಯಾಗಿ ಅರಿಯಬಹುದಾಗ ಸಮಾಜದ ಪ್ರಸ್ತುತತೆಯ.

ಹಳೆ ಬೇರು ಹೊಸ ಚಿಗುರ ಸಮ್ಮಿಶ್ರ ಸಾಲುಗಳ ಸಂಹಿತೆ,
ತರುಣರ ನವ ಶೋಧನೆಗೆ ಮೂಡಣದ ಮುನ್ನೋಟದಂತೆ.

ದುರ್ವಾಸರ ನುಡಿಗಳಿಗೆ ಕುಪಿತರಾಗದೆ,
ಸಂಯಮದಿ ನಡೆಯಲಿ ಸಮರ್ಥತೆಯ ಸಂಚಾರ.

ಸುಸ್ಥಿರ ಭವಿಷ್ಯಕ್ಕೆ ಬೇಕು ವಿಶ್ವಜ್ಞಾನ,
ಬಾನಾಡಿ ವಿಹರಿಸಲು ಸಹಕರಿಸುತ್ತಿದೆ ತಂತ್ರಜ್ಞಾನ.

ವಿಕಲಾಂಗರು ಸಮಾನರೆಂಬ ಜಾಗೃತಿಯ ಜಾಗಟೆ ಮೊಳಗಿಸಿ,
ವಿಶ್ವ ಸಂಸ್ಥೆ ಉತ್ತೇಜಿಸಿರೆಂದಿದೆ ಹಕ್ಕುಗಳ ರಕ್ಷಿಸಿ.

ರಚನೆ ಶ್ರೀಮತಿ ನಾಗಮಣಿ h b
ಸಹಶಿಕ್ಷಕಿ g h p s ಧರ್ಮಪುರ್.

- nagamani Kanaka

04 Dec 2024, 07:23 am
Download App from Playstore: