ಪ್ರೇಮ

ಪ್ರೇಮ ನೀ ಆಕಸ್ಮಿಕ ಪರಿಚಯ ನೀನು
ದೇವಲೋಕ ಕನ್ನೆಯ ಹೋಲುವ ರೂಪ ನಿನ್ನದು
ಅಪ್ಸರೆಯ ಸೌಮ್ಯತೆ ನಿನ್ನ ನಗು ನಿನ್ನದು

ನಿನ್ನ ವಯ್ಯಾರವ ಕಂಡು ವರುಣ ಧರೆಗಿಳಿದನು
ನಿನ್ನ ಅಂದ ಕಂಡು ರವಿ ಮಂಕಾದನು
ಚಂದಿರ ನಾಚಿ ನೀರಾಗಿ ಸೋತುಹೋದನು

ನಿನ್ನ ಕಣ್ಣಿನ ಕಾಡಿಗೆಯ ಕಂಡ ಇಂದ್ರ ತನ್ನ ಪಟ್ಟವನ್ನು ಕೆಳಗಿಟ್ಟ
ನಿನ್ನ ಸೌಂದರ್ಯ ಕಂಡು ಪಟ್ಟವನ್ನು ನಿನ್ನ ಸೌಂದರ್ಯಕೆ ಅಡವಿಟ್ಟು ಬಿಟ್ಟ
ಅಪರೂಪದ ರೂಪಾಸಿ ದೇವಲೋಕದ ಸುಂದರಿ ಇಂದ್ರನನ್ನೇ ಗೆದ್ದವಳು ಅವಳೇ ಪ್ರೇಮ

ನಿನ್ನ ಸೌಂದರ್ಯಕ್ಕೆ ಹೂವು ಕೂಡ ನಾಚುತ್ತೆ
ನಿನ್ನ ಮುಖದ ಕಾಂತಿಗೆ ಚಂದಿರ ಕಾಣೆಯಾದ
ನಿನ್ನ ನಡಿಗೆಯ ಕಂಡ ಮೋಡ
ನಿನ್ನ ವಯ್ಯರದ ನಡಿಗೆ ತುಂಬಾ ಮಳೆ ತರಿಸಿದ
ದೇವ ಲೋಕದ ಅಪ್ಸರೆಯ ರೂಪ
ರಂಭೆ ಊರ್ವಶಿ ಮೇನಕೆ ಯರು ಕೋಪ ಗೊಳ್ಳು ವಂತ ಸೌಂದರ್ಯ ಅವಳದು
ಮಲ್ಲಿಗೆ ಹೂ ನಾಚುವ ಮೂಕವು
ಗುಳಿ ಕೆನ್ನೆಯ ಮೊಗದವಳು

ದೇವಲೋಕದ ಕನ್ಯೆ
ಬಂದು ಸೇರು ನೀನೊಮ್ಮೆ

ಅಪರೂಪದ ರೂಪಾಸಿ ದೇವಲೋಕದ ಸುಂದರಿ ಇಂದ್ರನನ್ನೇ ಗೆದ್ದವಳು ಅವಳೇ ಪ್ರೇಮ

- Kannada Creation

19 Nov 2024, 06:44 am
Download App from Playstore: