ಸ್ವಪ್ನ
||ಯಾರು ನೀನು?
ಸುಮ್ಮನೇ ಕನಸಲ್ಲಿ ಬಂದ ಭ್ರಮೆಯೋ,
ಸಿಗುವೆನೆಂದು ಕುರುಹು ಬಿಟ್ಟ ರಮೆಯೋ..
ದ್ವಂದ್ವ ಸ್ಥಿತಿ ನನಗೆ...
ಯೋಚಿಸಿದಷ್ಟೂ ತುಡಿತ ಮನಕೆ
ಮಿಡಿತ ತಪ್ಪಿ ಜಿಗಿದಂತೆ ನಭಕೆ
ಹೇಗೆ ಬಂಧಿಯಾದೆನೋ ನಾ ನಿನ್ನುಸಿರ ಸೆರೆಮನೆಗೆ
ನಿರ್ದೋಷಿ ಮಾಡುವೆಯೇನೋ,ಹೆದರಿಕೆ ನನಗೆ
ಸೇರಲು ನಾವು ಬೆರೆತಂತೆ ಹಾಲು ಜೇನಿಗೆ
ಕೊನೆಗೂ ಕೊನೆಯಾಯ್ತು ಪ್ರೀತಿ ಬೇಸಿಗೆ..
ಅಬ್ಬಾ!!
ಹೇಗೋ ದಡ ಮುಟ್ಟಿದೆನೆಂಬ ತೃಪ್ತಿ ಕಾಣುತಿರೆ....
ದೂರದಿ ಕೇಳಿಸಿತು "ಹೊತ್ತಾಯ್ತು ಎದ್ದೇಳೋ".....
ನನ್ನ ತಾಯಿಯ ಕರೆ||
- Hithesh Kumar
14 Nov 2024, 10:55 pm
Download App from Playstore: