ಅಪ್ಪ: ನಿನ್ನಂತಾಗುವೆನೆ ನಾನು?
||ಬಾಲ್ಯದಿಂದಲೂ ಮನೆ ಹೊತ್ತ ಕಿರಣ ನೀನು,
ಪ್ರೌಢನಾದರೂ ಚಂಚಲ ಹರಿಣ ನಾನು|
ಬಡತನದ ಬೇಗೆಯಲಿ ಬೆಂದವ ನೀನು,
ಕೊರತೆಗಳ ಅರಿವೆ ಇಲ್ಲದೆ ಬೆಳೆದವ ನಾನು|
ಮೂರೊತ್ತು ಅನ್ನ ಸಿಕ್ಕರೆ ನಿನಗದು ಪರ್ವದಿನ,
ಸವಲತ್ತುಗಳ ಸೋಪಾನವಿದ್ದರು ಅತೃಪ್ತ ನನ್ನ ತನ|
ಮಗನ ವೃದ್ಧಿಗೆ ನಿರ್ಲಿಪ್ತ ತುಡಿತ ನಿನಗೆ,
ಕಂಡರೂ ಕಾಣದ ಅಸಹಾಯಕ ಸ್ಥಿತಿ ನನಗೆ|
ಜೀವನದ ಸಾಗರದಿ ನಿನಗಿಂತ ಮಿಗಿಲುಂಟೆ ನಾವಿಕ
ಯಾರ ಹೋಲಿಕೆ ಏಕೆ,ನಿನಗೆ ನೀನೆ ರೂಪಕ
- Hithesh Kumar
12 Nov 2024, 02:02 pm
Download App from Playstore: