ಒಳ ಮನಸ್ಸಿನ ಭಾವವನ್ನೇ ಹೊರ ತೋರಿಸುವ ಮುಖವಾಡ ಅರಿಯದ ಆ ದಿನ

ಹಚ್ಚ ಹಸಿರಿನ ವನಸಿರಿಯ
ಮಡಿಲಲ್ಲಿ,ಮಳೆಗಳಿಗೆ
ಮೈ ತುಂಬಿ ಹರಿಯುವ ನದಿಗಳು.

ಪ್ರಾಣಿ ಪಕ್ಷಿಗಳ ಇಂಪಾದ ಕೂಗಿನ,
ತೋಟ ಗದ್ದೆಗಳ ಮಲೆನಾಡು ನನ್ನೂರು.

ಮನೆಯವರೆಲ್ಲರು ತಿಂದರೂ ಮುಗಿಯದಷ್ಟು,
ಹಣನ್ನು ಕೊಡುವ ಸೀಬೆ, ಮಾವು, ಕಿತ್ತಳೆ,ಹಲಸಿನ ಮರಗಳು..

ಪ್ರತಿನಿತ್ಯದ ಊಟಕ್ಕೆ ರುಚಿ ರುಚಿಯಾದ ಪಲ್ಯಕ್ಕಾಗಿ,ಸುತ್ತಲೂ
ಸಿಗುತ್ತಿದ್ದ ಸೊಪ್ಪಿನ ಗಿಡಗಳು..

ಬಣ್ಣ ಬಣ್ಣದ ಹೂ-ಗಿಡಗಳ
ಮಧ್ಯದಲ್ಲಿರುವ
ಪುಟ್ಟ ಗುಡಿಸಲ ಅರಮನೆ ನಮ್ಮದು...

ಎಷ್ಟೇ ಜೋರಾದ ಮಳೆ, ಗುಡುಗು,ಮಿಂಚು ಬಂದರೂ ಸದಾ ಬೆಳಕು ನೀಡುವ ಚಿಮಣಿ ದೀಪಗಳು.....

ಯಾವುದೇ ಸಿನಿಮಾಕ್ಕೂ ಕಮ್ಮಿ
ಇರದ ಅಜ್ಜಿ ಹೇಳುವ ಒಂದೊಂದು ಅದ್ಭುತ ಕಥೆಗಳು.....

ಅಪ್ಪ ತೆಗೆದು ಇಡುತ್ತಿದ್ದ
ಬೆತ್ತದ ಕೋಲುನ್ನು ನೋಡಿದ
ಕೂಡಲೇ ಚಿಕ್ಕ ಪುಟ್ಟ ತಪ್ಪು ಮಾಡಲು ಭಯ ಪಡುತ್ತಿದ್ದ ಆ ದಿನಗಳು...

ಆಟ ಪಾಠಗಳ ಜೊತೆಯಲ್ಲಿ ಅಮ್ಮ ಹೇಳುವ ಚಿಕ್ಕ ಪುಟ್ಟ ಮನೆಗೆಲಸಗಳನ್ನು ಮಾಡುತ್ತ, ತಿಂದರೂ ತಿನ್ನಬೇಕೆನಿಸುವ
ಕಟ್ಟಿಗೆ ಒಲೆಯಲ್ಲಿ ಮಾಡಿದ ಅಮ್ಮನ ಕೈ ರುಚಿಯ ಅಡುಗೆಗಳು...

ಅಪ್ಪ ಅಮ್ಮನ ದಿನಗೂಲಿ
ಕೆಲಸದಲ್ಲಿ ಇರುವುದರಲ್ಲೇ ತೃಪ್ತಿ ಪಡುವ ಮನಸುಗಳು....

ಒಳ ಮನಸ್ಸಿನ ಭಾವವನ್ನೇ ಹೊರ ತೋರಿಸುವ ಮುಖವಾಡ ಅರಿಯದ
ಆ ದಿನಗಳು ಮತ್ತು ನಮ್ಮ ಬಾಲ್ಯವೇ ಸುಂದರ...

- Sandeep SG

12 Nov 2024, 12:02 pm
Download App from Playstore: