ದಾರಿ ನೀರೆ

||ಅಕ್ಷಿಗಳವು ಖಡ್ಗದ ತೀಕ್ಷ್ಣತೆಯೋ, ಶರಧಿಯ ಸೌಮ್ಯತೆಯೋ|
ನಸುನಗಲು ಭ್ರಮರದ ಕಡಿತವೋ,ಅನಿರೀಕ್ಷಿತ ತುಡಿತವೋ|
ಗುಳಿ ಕೆನ್ನೆಯದು ಅಸಾಧ್ಯ ಕೂಪವೋ,ದೈವ ಕಲೆಯ ರೂಪವೋ|
ಕಾಯವದು ಮದ್ದುಗಳ ಸರಪಳಿಯೋ,ಚಂದಿರನ ಲೇಪನವೋ|
ಮುಂಗುರುಳದು ಅಂತಕನ ಪಾಶವೋ,ಸಾಂಗತ್ಯದ ಕೋಶವೋ|
ನುಡಿಸಲೆನಿತು ನುಡಿವೆಯೋ,ಮುನಿವೆಯೋ ಧೈರ್ಯ ಸಾಲದು ನನಗೆ|
ಪರಿವೆ ಇದ್ದರೂ ಸಮೀಪಿಸಲು ಪರಿಮಿತಿ ನಿನಗೆ|


-ಹಿತೇಶ್


- Hithesh Kumar

07 Nov 2024, 01:11 pm
Download App from Playstore: