ಬಾಳಿನ ದೀಪ
ದೀಪವ ಹಚ್ಚಿ ಬೆಳಗುವ
ಜ್ಯೋತಿಯು ಆನಂದದ ಪ್ರತೀಕ
ಕತ್ತಲನು ಕಳೆಯುವ ಬೆಳಕಿನ
ಕಿರಣವು ಮೂಡಲಿ ಬಲು ಬೇಗ
ಬೆಳೆಯುವ ಮನವ ಬೆಳಗಲಿ ಎಂದೂ
ಬಾಳಿನ ಬೆಳಕು ಮೂಡಲಿ ಎಂದೂ
ನೋವು ನಲಿವಿನ ತೋರಣದಲ್ಲಿ
ಹಚ್ಚಿರಿ ನಲಿವಿನ ದೀಪ
ಅಂಧಕಾರವ ತೊರೆಯಲಿ ಎಂದು
ದುರಹಂಕಾರವ ಬಿಡಲಿ ಎಂದು
ಒಲುಮೆ ಪ್ರೀತಿಯ ಹನಿಯೂ ಮೂಡಲು
ಹಚ್ಚಿರಿ ಸಂತಸದ ದೀಪ
ಎಲ್ಲರ ಸಲಹುವ ಎಲ್ಲರನ್ನು ಮರಗುವ
ಎಲ್ಲರೆಲ್ಲರಲ್ಲೂ ಕಾಳಜಿ ತೋರಲು
ನಮ್ಮಯ ಸಂತಸದ ಜೀವನ ನಡೆಸಲು
ಹಚ್ಚಿರಿ ಪ್ರೀತಿಯ ದೀಪ
ಜಡದ ಮನಸಿನ ಪುಟಗಳ ತೆರೆಯಲು
ದುಃಖದ ಬದುಕು ಕ್ಷಮನ ಮಾಡಲು
ಒಡೆದ ಹೃದಯವ ಒಂದು ಗೂಡಲು
ಹಚ್ಚಿರಿ ನವ ದೀಪ
ಕನಸು ಕಾಣುವ ರೆಕ್ಕೆಗೆ ಸ್ಪೂರ್ತಿ ನೀಡುವ
ಮನದ ಕತ್ತಲೆಯ ದೂರವ ಮಾಡುವ
ಸುಜ್ಞಾನದಿಂದ ಅಜ್ಞಾನವ ಕಳೆಯುವ
ಹಚ್ಚಿರಿ ಬೆಳಕಿನ ದೀಪ
ಗಿರೀಶಚಾರ S
ಸಹಶಿಕ್ಷಕರು
SJM ಕನ್ನಡ ಮಾಧ್ಯಮ ಶಾಲೆ
ಮುರುಘಾ ಮಠ ಚಿತ್ರದುರ್ಗ
- Girishachara S
06 Nov 2024, 07:24 am
Download App from Playstore: