ಕನ್ನಡ

||ಕೋಟ್ಯಂತರ ಆಗಂತುಕರ ದರ್ಪದ ಕಾಲ್ತುಳಿತಕ್ಕೆ ಸಿಕ್ಕಿ ನಲುಗಿದರೂ ತನ್ನವರಂತೆ ನೋಡುವ ತಾಯಿ ಭಾಷೆ|
ಅನ್ಯಭಾಷಿಕರಿಗೂ ಬೇಲಿಯಾಗದೇ ಸಹನೆಯ ಸಂಬಂಧವಾಗುವ,ನನ್ನ ಭಾಷೆ|
ನೋಡಲು ಕಣ್ಮನದ ತೃಷೆಯನಿಳಿಸಿ ಮನಸೂರೆಗೊಳಿಸುವ, ನನ್ನ ಭಾಷೆ|
ನೆನೆಯಲು ರುಧಿರದ ಕಣಗಳಲ್ಲೂ ಕರಗದ ಆತ್ಮಸ್ಥೈರ್ಯವನ್ನು ತುಂಬುವ, ನನ್ನ ಭಾಷೆ|
ಬರೆಯಲು ಸ್ವಚ್ಚಂದ, ಅಕುಂಠಿತ,ಅವಿಸ್ಮರಣೀಯ ದೃಶ್ಯಕಾವ್ಯ ನನ್ನ ಭಾಷೆ|
ಆರಾಧಿಸುವ ಕೋಟಿ ಮನಗಳಲಿ ಆಚಂದ್ರಾರ್ಕವಾಗಿ ನಿಲ್ಲುವ ನನ್ನ ಭಾಷೆ|
ಉತ್ಕೃಷ್ಟ ಸಾಂಸ್ಕೃತಿಕ, ಚರಿತ್ರಾತ್ಮಕ,ಚಾರಿತ್ರ್ಯ ಬದ್ಧ, ಕಲಾತ್ಮಕ ಪರಂಪರೆಯ ಸೆಲೆ,ನನ್ನ ಭಾಷೆ||


ಕನ್ನಡ ದೇಶದೊಳ್,ಕನ್ನಡದ ನೆರಳಿನಲ್ಲಿ...

-ಹಿತೇಶ್

- Hithesh Kumar

01 Nov 2024, 12:22 pm
Download App from Playstore: