ಬೆಳಕು
ಬೆಳಕಿನ ತರಂಗವು ಕಗ್ಗತ್ತಲೆಯ ರಾತ್ರಿಗೆ ದಾರಿ ತೋರಿಸುತ್ತಿರಲು
ಆಶಾವಾದದ ಚಿಹ್ನೆಯು ಬೆಳಕಿನ ರೂಪದಲ್ಲಿ ಮೂಡಲು
ಆಕಾಶದುದ್ದಕ್ಕೂ ಸೂರ್ಯನ ಕಿರಣಗಳು ನರ್ತಿಸಲು
ಜಗತ್ತಿಗೆ ಸುವರ್ಣ ಲೇಪನ ಬಣ್ಣ ಬಳಿಯಲು
ಎಂದು ಮುಗಿಯದ ಜೀವನದ ದಾರಿ ತೋರಿಸಲು
ಸಾಗರದಲ್ಲಿನ ನೀಲಿಯಲಿ ಬೆಳಕು ಮೂಡಲು
ಸ್ವರ್ಗದ ನೋಟವು ಮೂಡಿ ಬರಲು
ಅದೊಂದು ಮಾಂತ್ರಿಕ ಜಗತ್ತನ್ನು ಸೃಷ್ಟಿಸಲು
ಮೇಣದ ಬತ್ತಿಯ ಉರಿಯು ಚಿಕ್ಕದಿದ್ದರೂ ಕಗ್ಗತ್ತಲೆಯ ದೂರವಾಗಿಸುವ ಶಕ್ತಿ ಹೊಂದಿರಲು
ಚಿಕ್ಕ ಕಿಡಿಯೊಂದು ಸಾಕು ಅಜ್ಞಾನ ಹೊಡೆದೋಡಿಸಲು
ಮೂಡಣ ಸೂರ್ಯನು ಬೆಳಕಿನ ನಮೂನೆಯು ಆಕಾಶದೆತ್ತರಕ್ಕೆ ಬೆಳಕಿನ ಚಿತ್ತಾರ ಮೂಡಿಸಲು ಅದೊಂದು ವಿಹಂಗಮ ನೋಟವು
ಇರುಳ ಚಂದಿರನು ಹಾಲಿನಂತಹ ಬೆಳಕನ್ನು ಚೆಲ್ಲಲು ಮೃದು ಹತ್ತಿಯಂತೆ ಕಾಣುತ್ತಿರಲು ಬೆಳಕು ಮತ್ತು ಕತ್ತಲೆಯ ಸಮಾನತೆಯ ಸಾರುತಿರಲು
ಒಂದು ಕಂದಿಲು ಸಾಕು ಇಡೀ ದಾರಿಯ ಬೆಳಗಲು ಅದೊಂದು ಶಕ್ತಿಯ ಮತ್ತು ನಂಬಿಕೆಯ ಸಂಕೇತವಾಗಿರಲು
ಬೆಳಕು ಸಕಲ ಸೃಷ್ಟಿಯ ಅವಶ್ಯಕತೆ ಆಗಿರಲು ಅದೊಂದು ಅತೀತ ಶಕ್ತಿಯಾಗಿರಲು ಜೀವನಕ್ಕೆ ಒಂದು ಮೂಲವಾಗಿರಲು
-ಕಾವ್ಯಪ್ರಿಯ
- ಶಹಾಬುದ್ದೀನ್ ಕೆ. (ಕಾವ್ಯಪ್ರೀಯ)
30 Oct 2024, 11:43 pm
Download App from Playstore: