ಮಳೆ
ಮಳೆಯೇ
ಇಳೆಯಲ್ಲಿ ಬೆರೆಯುವುದನ್ನು ಕಲಿಸಿದೆ
ಮಳೆಯೇ
ಸಮುದ್ರದಿಂದ ಆವಿಯಾಗುವುದನ್ನು ಕಲಿಸಿದೆ
ಮಳೆಯೇ
ಮಂಜಲ್ಲಿ ಕರಗುವುದನ್ನು ಕಲಿಸಿದೆ
ಮಳೆಯೇ
ಕಣ್ಣಂಚಲಿ ದುಃಖವ ಹರಿಸುವುದನ್ನು ಕಲಿಸಿದೆ
ಮಳೆಯೇ
ಕಲ್ಲು ಬಂಡೆಯಂತಹ ಕಷ್ಟವನ್ನು ಕೊರೆಸುವುದನ್ನು ಕಲಿಸಿದೆ
ಮಳೆಯೇ
ಎಲೆಯ ಮೇಲಿನ ಇಬ್ಬನಿಯ ಸವಿಯಲು ಕಲಿಸಿದೆ
ಮಳೆಯೇ
ಬದುಕಲ್ಲಿ ಕಾಮನಬಿಲ್ಲಿನ ಸಪ್ತ ವರ್ಣಗಳನ್ನು ರಚಿಸಿದೆ
ಮಳೆಯೇ
ಕಷ್ಟಗಳಿಗೆ ಸಹನೆಯಿಂದ ಎದುರಿಸುವುದನ್ನು ಕಲಿಸಿದೆ
ಮಳೆಯೇ
ಕಣ್ಣಲಿ ಮಿಂಚಿನ ಆಸೆಯನ್ನು ಹರಿಸಿದೆ
ಮಳೆಯೇ
ಗುಡುಗಿಗೆ ನಡುಗದೆ ಎದೆಯೊಡ್ಡಿ ನಿಲ್ಲಲು ಕಲಿಸಿದೆ
ಮಳೆಯೇ
ಕಾರ್ಮೋಡದಲ್ಲಿಯೂ ಆಶಾವಾದವ ಕಲಿಸಿದೆ
ಮಳೆಯೇ
ಕೂಲ್ ಮಿಂಚಿನಿಂದ ಬೆಳಕು ಪಡೆಯಲು ಕಲಿಸಿದೆ
ಮಳೆಯೇ
ನೀರಿನ ಆರ್ಭಟವನ್ನು ಎದುರಿಸಲು ಕಲಿಸಿದೆ
ಮಳೆಯೇ
ಮಾಗಿಯ ಬಿಸಿಗೆ ತಂಪಾಗಲು ಕಲಿಸಿದೆ
ಮಳೆಯೇ
ಕಷ್ಟ ಕಾರ್ಪಣ್ಯಗಳಲ್ಲಿ ಮಿಂದೇಳುವುದನ್ನು ಕಲಿಸಿದೆ
ಮಳೆಯೇ
ಬಾನೆತ್ತರದಿಂದ ಬಿದ್ದರೂ ಎದ್ದು ನಿಲ್ಲುವುದನ್ನು ಕಲಿಸಿದೆ
ಮಳೆಯೇ
ಹುಲ್ಲು ಕಡ್ಡಿಗಳಿಗೆ ಆಸರೆಯಾಗುವುದನ್ನು ಕಲಿಸಿದೆ
ಮಳೆಯೇ
ಜೀವನವೆಂಬ ಸಾಗರದಲ್ಲಿ ಲೀನವಾಗಲು ಕಲಿಸಿದೆ
- ಶಹಾಬುದ್ದೀನ್ ಕೆ. (ಕಾವ್ಯಪ್ರೀಯ)
17 Oct 2024, 03:27 pm
Download App from Playstore: