ಕಾಲಚಕ್ರ
ಅತ್ತೆಯಾದವಳು ಹಿಂದೊಮ್ಮೆ ತಾನೂ
ಸೊಸೆಯಾಗಿದ್ದೆ ಎಂದು ಏಕೆ ಮರೆತಳು?
ಸೊಸೆಯಾದವಳು ಮುಂದೊಂದು ದಿನ
ಅತ್ತೆಯಾಗಲೇಬೇಕಲ್ಲವೇ ಎಂದು
ಏಕೆ ಅರಿತ್ತಿಲ್ಲ?
ಮಗಳಾದವಳು ತಾನೂ ಒಬ್ಬ
ತಾಯಿಯಾಗಬೇಕು ಎಂದು ಏಕೆ ತಿಳಿದಿಲ್ಲ?
ತಾಯಿಯಾಗಿದ್ದವಳು ನಾನೂ
ಹಿಂದೆ ಒಂದು ಮನೆಯ ಮಗಳಾಗಿದ್ದೆ
ಎಂದು ಏಕೆ ಮರೆತಳು?
ಮಗನು ಮುಂದೊಂದು ದಿನ
ತಂದೆಯಾಗಲೇಬೇಕೆಂಬ ಸತ್ಯವನ್ನೇಕೆ
ಮರೆಮಾಚುತ್ತಿದ್ದಾನೆ
ತಂದೆಯಾಗಿದ್ದವನು ತಾನೂ
ಮಗನಾಗಿದ್ದಾಗ ಹೀಗೇ ಇದ್ದೆ
ಎಂಬ ನಿಜವನ್ನೇಕೆ ಮರೆತ?.
ಶ್ರೀಮಂತನಾದವನು ತನ್ನ
ಬಹುಮಹಡಿ ಮನೆಯನ್ನು
ಯಾರು ಕಟ್ಟಿದರೆಂದೇಕೆ ಯೋಚಿಸುತಿಲ್ಲಾ?
ಕಾಲಚಕ್ರವನ್ನು ಯಾರಿಂದಲೂ
ನಿಲ್ಲಿಸಲಾಗಲ್ಲ. ಅದು ಎಲ್ಲರಿಗೂ
ಸರದಿಯಂತೆ ಪಾಠ ಕಲಿಸುತ್ತೆ.
ಸಮಯವೆಂಬ ಪಕ್ಷಿಯು
ನಮ್ಮನ್ನು ಕೆಲವೊಮ್ಮೆ ಬಹು
ದೂರ, ಬಹು ಎತ್ತರಕ್ಕೆ ಕರೆದೋಯ್ದು
ಸಮುದ್ರದಾಳಕ್ಕೆ ಬಿಟ್ಟುಬಿಡುತ್ತದೆ.
ಮನುಷ್ಯ ನೋವು, ನಲಿವು, ಅಳು
ನಗು,ದ್ವೇಷ, ಪ್ರೀತಿ ಇವೆಲ್ಲವನ್ನು
ಸಮನಾಗಿ ಸವಿದರೆ ಮಾತ್ರವಲ್ಲವೇ
ಅದಕ್ಕೊಂದು ಬೆಲೆಕಟ್ಟಲು ಸಾಧ್ಯ.
- KALAVATI KITTA
16 Oct 2024, 05:37 pm
Download App from Playstore: