ಅವಳಿಗಾಗಿ
ಮಂದಾನಿಲವೇ ನೀನು
ಮುಂದೆ ಮುಂದೆ ಏಕೆ ಓಡುವೆ?
ನನ್ನವಳ ವದನಾರವಿಂದದ
ಮೇಲಿರುವ ಮುಂಗುರುಳನೊಮ್ಮೆ
ಕೆಣಕಿ ನೋಡು. ಎಷ್ಟು ಮುದ್ದಾಗಿ ಕಾಣುವಳು.
ನೀನು ಅವಳಿಗಾಗಿ ಒಂದು ಜೋಗುಳ ಹಾಡು. ನನ್ನ ನೆನಪಿನಲ್ಲಿ ನಿದ್ರಿಸಿ
ಅವಳಿಗೆ ಎಷ್ಟು ದಿನವಾಯಿತು ಕಾಣೆ
ನನ್ನ ಮೇಲಿನ ಕೋಪಕ್ಕೆ
ನಿನ್ನನ್ನೊಮ್ಮೆ ಬೈದರು ಕೋಪಗೊಳ್ಳಬೇಡ. ಏಕೆಂದರೆ
ಕನಸಿನಲ್ಲಿಯೂ ಕೂಡ
ಅವಳಿಗೆ ನನ್ನನ್ನು ಬಿಟ್ಟರೆ
ಬೇರೆ ಯಾವುದೂ ಸೇರದು.
ಓ ನೀಲಿಯ ಆಗಸವೇ, ನೀನು
ಕಾರ್ಮೋಡಗಳಿಗೆ ಸ್ವಲ್ಪ ನಿಂತು,
ನಂತರ ಹೊರಡಿ ಎಂದು ಹೇಳಬಾರದೇ?
ಏಕೆಂದರೆ ನನ್ನಾಕೆ ನಿನ್ನ ಮೇಲೆ
ಕಲ್ಪನೆಗಳ ಚಿತ್ತಾರಗಳನ್ನು
ಬರೆಯುತ್ತಿರುವಳು. ಅಲ್ಲಿ
ಕೇವಲ ನನ್ನ ಚಿತ್ರಗಳೇ ಉಂಟು.
ಈ ಕಾರ್ಮೋಡಗಳಿಗೇನು ಕೆಲಸ
ಓ ಕನಸುಗಾರನೆ, ನೀನು ನನ್ನವಳ
ನಿದ್ರೆಯಲ್ಲಿ ಸುಂದರವಾದ ಸ್ವಪ್ನಗಳನ್ನು
ಹೊತ್ತಯ್ಯಬೇಕು, ಏಕೆಂದರೆ ಕೆಟ್ಟ
ಸ್ವಪ್ನ ಗಳೆಂದರೆ ಅವಳಿಗೆ ಬೆದರಿಕೆ
ಇನ್ನೊಂದು ಮಾತು. ಅವಳ ಕನಸುಗಳಿಗೆ ನನ್ನ ನನ್ನ ರೂಪಗಳನ್ನು
ಕೊಡಲು ಮರೆಯಬೇಡ.
ನಂದನ ವನದ ಕುಸುಮಗಳೇ
ನೀವು ಹೀಗೆ ಅರಳಿ ನಗುತ್ತಿರಿ.
ನನ್ನವಳಿಗೆ ನೀವೆಂದರೆ ಬಲು ಇಷ್ಟ
ನಿಮ್ಮ ಅರಳುವ ಮುಖಗಳಲ್ಲಿ
ಅವಳು ನನ್ನ ಮೊಗವನ್ನೇ ಕಾಣುವಳು.
ಅವಳು ನಿಮ್ಮನ್ನು ತನ್ನ ಮುಡಿಗೇರಿಸಿಕೊಳ್ಳಬೇಕೆಂದರೆ
ನಾನೇ ಬೇಕು.
ಕಾರಣ ನೀವು ಬಿರುದು ನಗುವ
ಮುನ್ನ,ನನ್ನನ್ನು ಕರೆಯಲು ಮರೆಯದಿರಿ.
- KALAVATI KITTA
14 Oct 2024, 07:34 pm
Download App from Playstore: