ಬಿದಿಗೆ ಚಂದ್ರ ಮತ್ತು ಮೋಡ
ಮೋಡದ ಮರೆಯಲಿ
ಮುಸುಕಿನ ಸೆರೆಯಲಿ
ಬಿದಿಗೆ ಚಂದ್ರ
ಬಯಸಿ ಅವಿತನೋ?
ಮೇಘಗಳಿಗೆ ಸೆರೆಯಾದನೋ?
ಕಣ್ಣಮುಚ್ಚಾಲೆ ಆಟವೋ?
ಬಿಡುಗಡೆಗಾಗಿ ಗುದ್ದಾಟವೋ?
ತೆರೆಯ ಹಿಂದೆ ನಗುತಿರುವನೊ?
ಸೆರಮನೆ ತೆರೆಯಲು ಕಾಯುತಿರುವನೊ?
ಆಡಿ ನಲಿದು ಅರಳುತಿರುವನೊ?
ನೊಂದು ಮುದುಡುತಿರುವನೊ?
-ಶ್ರೀಕಾವ್ಯ
- ಶ್ರೀಕಾವ್ಯ
08 Oct 2024, 10:58 pm
Download App from Playstore: