ನನ್ನವಳೇ ಹಾಗೆ...✍️
ಅವಳ ಅಂದವೇ ಹಾಗೆ!
ಪರಿಮಳ ಸುಸುವ ಹೂವಿನ ಹಾಗೆ!!
ಅವಳ ಕಣ್ಣೋಟವೆ ಹಾಗೆ!
ಹುಣ್ಣಿಮೆಯ ಚಂದಿರ ಹೊಳೆಯುವ ಹಾಗೆ!!
ಅವಳ ಸಿಹಿ ಮಾತುಗಳೇ ಹಾಗೆ!
ನನ್ನೆದೆಗೆ ತಾಕುವ ಬಾಣದ ಹಾಗೆ!!
ಅವಳ ಸ್ಪರ್ಶವೇ ಹಾಗೆ!
ಭೂಮಿಗೆ ಮೊದಲ ಮಳೆ ಸುರಿದ ಹಾಗೆ!!
ಅವಳಿಡುವ ಕುಂಕುಮವೇ ಹಾಗೆ!
ರಂಗೇರಿ ಹೊಳೆಯುವ ಸೂರ್ಯನ ಹಾಗೆ!!
ನನ್ನವಳೆ ಹಾಗೆ!
ಗಂಧರ್ವ ಲೋಕದ ಕನ್ನೆಯ ಹಾಗೆ!!
Saleem md...✍️
- saleem Dalawai
29 Sep 2024, 03:44 pm
Download App from Playstore: