ಅನುಜನ ಜನುಮ ದಿನ


ಅಪರೂಪಕ್ಕೂ ಪ್ರತಿರೂಪ ನೀನು
ಸಜ್ಜನಿಕೆಗೆ ಸಮಾನಾರ್ಥ ನೀನು
ಅಕ್ಕ ಅನ್ನೊ ಪದವಿಗೆ ಕಾರಣ ನೀನು
ಅಕ್ಕರೆಯ ಪ್ರೀತಿ ನೀಡುವ ಜೀವ
ಮಮತೆ ವಾತ್ಸಲ್ಯವ ಧಾರೆ ಎರೆವ ಅನುಜ
ಅಣ್ಣನಂತೆ ಸದಾ ಕಾಯುವ ಕಾವಲುಗಾರ
ನನ್ನ ಜೀವನದಲ್ಲಿ ಸಿಕ್ಕ ಅತ್ಯಮೂಲ್ಯ ಉಡುಗೊರೆ
ಯಾವ ಜನುಮದ ಅದೃಷ್ಟವೋ
ನೀ ನನ್ನ ಸಹೋದರನಾಗಿ ಬಂದದ್ದು
ಈ ಜೀವಕ್ಕೆ ಬೇರೆ ಏನೂ ಬೇಡಿಕೆಯಿಲ್ಲ
ಎಂದೆಂದಿಗೂ ನಮ್ಮ ಅನುಬಂಧ ಹೀಗೆ ಇರಬೇಕು
ಸದಾ ನೀ ನಗು ನಗುತಾ ಖುಷಿಯಾಗಿರಬೇಕು
ನೀ ನಡೆವ ದಾರಿಯಲ್ಲಿ ಏಳಿಗೆ ಯಶಸ್ಸು ತುಂಬಿರಲಿ
ನಿನ್ನ ಕಂಡ ಕನಸ್ಸೆಲ್ಲಾ ನನಸಾಗಲಿ
ಆ ದೇವರು ಆರೋಗ್ಯ ಆಯುಷ್ಯ ಕೊಟ್ಟು ಕಾಪಾಡಲಿ
❤ಹುಟ್ಟು ಹಬ್ಬದ ಶುಭಾಶಯಗಳು ತಮ್ಮು❤

- ರಂಜಿತ ಭಾವನೆಗಳ ಸುಳಿಯಲ್ಲಿ

26 Sep 2024, 09:52 pm
Download App from Playstore: