ಸಮ್ಮೋಹಿತಳು

ನಿನ್ನ ಸೆಳೆತಕೆ
ಸಮ್ಮೋಹಿತಳು ನಾನು

ನಿನ್ನ ಪ್ರೀತಿಯಲಿ
ಮಿಂದೆದ್ದ ಮೇಲೂ
ಮೋಹಿಸಿದೆ ಇರಲಿ
ಹೇಗೆ ಹೇಳು

ನಿನ್ನೊಲವ ಅಲೆಗಳು
ಮನವ ತೋಯ್ದ ಮೇಲು
ಕಡಲಿಗೆ ಕೈಚಾಚದೆ ಹೇಗಿರಲಿ
ನೀನೆ ಹೇಳು

ಬೆರಳುಗಳು ಸೋಕಿ
ಮುಂಗುರುಳು ಮುಗಳ್ನಗಲು
ಮಿನುಗಿದ ಕಣ್ಣುಗಳಲಿ
ಪ್ರೀತಿಯ ನೀನೆ ನೋಡು

ತಂಗಾಳಿಯ ಹಿತವು
ಕಿರುಬೆರಳಲೆ ಕುಳಿತು
ಕೆಣಕುತಲೆ ಇರಲು
ಸೋಲದೆ ಹೇಗಿರಲಿ ಹೇಳು
-- ಶ್ರೀಕಾವ್ಯ

- ಶ್ರೀಕಾವ್ಯ

19 Sep 2024, 08:27 pm
Download App from Playstore: