ಅಮ್ಮ

ಪಯಣ ದಾರಿ ,
ಅವಳ ಹುಡುಕಿ
ಸಿಗುವುದೆಂದು?
ಅವಳಿರುವ ಹಾದಿ....

ಕಾರ್ಮೋಡದ ಕತ್ತಲು
ಮನದಲ್ಲಿಂದು,
ಮತ್ತೆ ಬೆಳಕು
ಬೆಳಗುವಳೆಂದು.....

ನೋವನುಂಡು
ಅಳುವೆನಿಂದು,
ಅವಳ ಕಂಡು
ನಗುವೆನೆಂದು?

ಅವಳ ನೆನೆದ
ದಿನಗಳನ್ನು
ಗೀಚುತ್ತಲಿರುವೆ
ದಿನವೂ ಇಂದು ....

ಅವಳು ಇರದ ಜಗವನಿಂದು ,
ನಾನು ಕೂಡ ಮರೆಯಲೆಂದು......
✍️ಸಂದೀಪ್ ಎಸ್ ಜಿ

- Sandeep SG

19 Sep 2024, 07:28 pm
Download App from Playstore: